

ಲಖನೌ: ಮುಸ್ಲಿಮರು ಗಡ್ಡವನ್ನು ಬೋಳಿಸುವುದರ ವಿರುದ್ಧ ಉತ್ತರ ಪ್ರದೇಶದ ದಾರುಲ್ ಉಲೂಮ್ ದಿಯೋಬ್ಯಾಂಡ್ ಫತ್ವಾ ಹೊರಡಿಸಿದೆ. ಗಡ್ಡ ಶೇವ್ ಮಾಡುವುದು ಇಸ್ಲಾಂ ವಿರೋಧಿ ಎಂದಿರುವ ದಿಯೋ ಬ್ಯಾಂಡ್ನ ಮುಫ್ತಿಗಳು , ಶರಿಯಾ ಕಾನೂನು ಪ್ರಕಾರ ಯಾವುದೇ ಧರ್ಮದ ವ್ಯಕ್ತಿಯ ಗಡ್ಡವನ್ನು ಬೋಳಿಸುವುದು ತಪ್ಪು. ಹಾಗಾಗಿ ಕ್ಷೌರಿಕನಾದವನು ಬೇರೆ ಉದ್ಯೋಗ ಕಂಡುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.