
ತಾಪಿ(ಗುಜರಾತ್): ಗುಜರಾತ್ ನ ತಾಪಿಯಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಧಮ್ ಪುರದಲ್ಲಿ ಆಗಸ್ಟ್ 5 ರಂದು ಗುಂಡಿನ ದಾಳಿ ನಡೆಸಿದ್ದ ಬಂಧಿತ ಉಗ್ರ ನಾವೇದ್ ಸಹಚರರು ಎಂಬ ಶಂಕೆ ಹಿನ್ನೆಲೆ ಬಂಧಿಸಲಾಗಿದೆ.
ಬಂಧಿತ ಉಗ್ರರನ್ನು ಎಟಿಎಸ್ ಗೆ ಹಸ್ತಾಂತರಿಸಲಾಗಿದ್ದು, ಭಯೋತ್ಪಾದನಾ ನಿಗ್ರಹ ದಳ ಶಂಕಿತ ಉಗ್ರರ ವಿಚಾರಣೆ ನಡೆಸುತ್ತಿದೆ.
ಉಧಂಪುರ ದಾಳಿ ನಡೆಸಿದಾಗ ಪಾಕ್ ಉಗ್ರ ನಾವೇದ್ ಜತೆಗಿದ್ದ ಇತರೆ ಇಬ್ಬರು ಉಗ್ರರ ರೇಖಾಚಿತ್ರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಿನ್ನೆ ಬಿಡುಗಡೆ ಮಾಡಿತ್ತು.
Advertisement