

ನವದೆಹಲಿ: ಮುಂಗಾರು ಮಳೆ ಹಿನ್ನಡೆಯಾಗಿರುವುದರಿಂದ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಪ್ರತಿ ಕೆಜಿಗೆ ರು.50 ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಹಾಪ್ ಕಾಮ್ಸ್ ನಲ್ಲಿ 1 ಕೆಜಿಗೆ ರು.68 ಇದ್ದು, ಸೂಪರ್ ಮಾರುಕಟ್ಟೆಯಲ್ಲಿ ರು.64ಕ್ಕೆ ಮಾರಾಟವಾಗುತ್ತಿದೆ. ಇನ್ನು ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ರು.68ರಿಂದ 70ರವರೆಗೆ ಮಾರಾಟವಾಗುತ್ತಿದೆ.
ಇನ್ನು ಉತ್ತರ ಭಾರತದಲ್ಲಿಯೂ ಈರುಳ್ಳಿ ಬೆಲೆ ಗಗನಕ್ಕೇರಿದೆ. ಮಹರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಭಾರಿ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿತ್ತು. ಈ ಹಿನ್ನಲೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗೋಧಾಮಿನಲ್ಲಿ ಸ್ಟಾಕ್ ಇಲ್ಲದ ಕಾರಣ ಬೆಲೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ನಿನ್ನೆ ಈರುಳ್ಳಿ ದರ ಕೆಜಿಗೆ ರು.80 ಹೆಚ್ಚಾಗಿದೆ. ಹೀಗಾಗಿ, ದೆಹಲಿ ಸರ್ಕಾರ ರೈತರಿಂದ ನೇರವಾಗಿ ಈರುಳ್ಳಿಯನ್ನಾ ಖರೀದಿಸಿ ಗ್ರಾಹಕರಿಗೆ ರು.30ರ ದರದಲ್ಲಿ ಮಾರಾಟ ಮಾಡುತ್ತಿದೆ.
ಮುಂಬೈನಲ್ಲಿ 1 ಕೆಜಿ ಈರುಳ್ಳಿಗೆ ರು.50 ಇದ್ದು, ರು.100ಕ್ಕೆ ತಲುಪುವ ಸಾಧ್ಯತೆ ಇದೆ. ಅದೇ ರೀತಿ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈರುಳ್ಳಿ ದರ ಕೆಜಿ ರು.80ರಿಂದ ರು.90ರವರೆಗೆ ಮಾರಾಟವಾಗುತ್ತಿದೆ. ಛಂಡೀಗಡ, ಶಿಮ್ಲಾದಲ್ಲಿ ಕೆಜಿ ಈರುಳ್ಳಿ ಬೆಲೆ ರು.70 ತಲುಪಿದೆ.