ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಭದ್ರಾತ ಸಲಹೆಗಾರರ ಮಟ್ಟದ ಮಾತುಕತೆ ರದ್ದುಗೊಂಡಿದ್ದು ಇದರ ಬೆನ್ನಲ್ಲೇ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕುಪ್ವಾರ ಬಳಿ ಪಾಕ್ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ ಕಿರಿಯ ನಿಯೋಜಿತ ಅಧಿಕಾರಿ(ಜೆಸಿಒ)ಯೊಬ್ಬರು ಮೃತಪಟ್ಟಿದ್ದಾರೆ.
ಕಳೆದ ರಾತ್ರಿ 1 ಗಂಟೆಯಿಂದ ಗಡಿಯ ನೌಗಮ್ ಸೆಕ್ಟರ್ ಬಳಿ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದು, ನಂತರ ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರ ಹೇಳಿದ್ದಾರೆ.