

ನವದೆಹಲಿ: ತನ್ನದೇ ನಿಲುವಿನಿಂದ ಯೂಟರ್ನ್ ತೆಗೆದು ಕೊಂಡಿರುವ ಕಾನೂನು ಆಂಯೋಗ, ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಲು ಶಿಫಾರಸು ಮಾಡಿದೆ.
ಆಯೋಗದ 272 ಪುಟದ ಕರಡು ವರದಿಯಲ್ಲಿ ಸಾಧ್ಯವಾದಷ್ಟು ತ್ವರಿತವಾಗಿ ಶಾಸನ ಪುಸ್ತಕದಿಂದ ಗಲ್ಲುಶಿಕ್ಷೆಯನ್ನು ಅಳಿಸಿಹಾಕಲು ಶಿಫಾರಸು ಮಾಡಲಾಗಿದೆ. ಆದರೆ ಇದರಲ್ಲಿ ಭಯೋತ್ಪಾದನೆ ಪ್ರಕರಣಗಳನ್ನು ಮಾತ್ರ ಹೊರತುಪಡಿಸಬಹುದು ಎಂದೂ ಹೇಳಲಾಗಿದೆ. ವಿಶ್ವದಲ್ಲಿ ಕೇವಲ 59 ದೇಶಗಳಲ್ಲಿ ಮಾತ್ರ ಇನ್ನೂ ಗಲ್ಲು ಶಿಕ್ಷೆ ಅಸ್ತಿತ್ವದಲ್ಲಿದ್ದು, ಮುಂಬೈ ದಾಳಿಗಾಗಿ ಯಾಕುಬ್ ಮೆಮೊನ್ ಗೆ ಗಲ್ಲುಶಿಕ್ಷೆ ನೀಡಿದಾಗ ಮರಣದಂಡನೆಗೆ ಸಂಬಂಧಿಸಿ ನಡೆದ ಚರ್ಚೆಗಳು ಆಂಯೋಗದ ವರದಿ ಮೇಲೆ ಪರಿಣಾಮ ಬೀರಿದಂತಿದೆ.