ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಪ್ರಮುಖ ರಸ್ತೆಗಳು, ಸುರಂಗ, ಮನೆಗಳು ಹಾಗೂ ಶಾಲೆಗಳಿಗೆ ನೀರು ನುಗ್ಗಿದ್ದು ಚೆನ್ನೈ ನಗರ ತೇಲುವ ತೆಪ್ಪದಂತಾಗಿದೆ. ವಾಹನ ಸಂಚಾರ, ರೈಲು ಓಡಾಟ, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಭಾರೀ ಮಳೆಯಿಂದಾಗಿ ಮಧ್ಯ ಕೈಲಾಶ್ ಸಿಗ್ನಲ್ ಬಳಿಯ ರಸ್ತೆಯಲ್ಲೇ ದೊಡ್ಡ ಗುಂಡಿ ಬಿದ್ದಿದೆ. ಇದಷ್ಟೇ ಅಲ್ಲದೆ ಹಲವೆಡೆ ಭೂ ಕುಸಿತ ಕೂಡ ಉಂಟಾಗಿದೆ.