ಘರ್ಷಣೆಗೆ ಕಾರಣವಾಯ್ತು ಗೋಮಾಂಸ ಸಾಗಣೆ ವದಂತಿ

ಗೋಮಾಂಸ ಸಾಗಣೆ ಮಾಡಲಾಗುತ್ತಿದ್ದ ಆರೋಪದಡಿ ಗೋರಕ್ಷಕರು ಟ್ರಕ್ ವೊಂದನ್ನು ತಡೆದು ನಿಲ್ಲಿಸಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಘರ್ಷಣೆಗೆ ಕಾರಣವಾಗಿದೆ.
ಹರ್ಯಾಣ
ಹರ್ಯಾಣ
Updated on: 

ಗುರಗಾಂವ್: ಗೋಮಾಂಸ ಸಾಗಣೆ ಮಾಡಲಾಗುತ್ತಿದ್ದ ಆರೋಪದಡಿ ಗೋರಕ್ಷಕರು ಟ್ರಕ್ ವೊಂದನ್ನು ತಡೆದು ನಿಲ್ಲಿಸಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಘರ್ಷಣೆಗೆ ಕಾರಣವಾಗಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. " ಗೋರಕ್ಷಣೆ ಮಾಡುವವರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಇದು ಕೋಮು ಘರ್ಷಣೆ ಅಲ್ಲ ಎಂದು ಹರ್ಯಾಣದ ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಆರ್.ಎಸ್ ಸಂಗ್ವಾನ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮಗಳು ಹರ್ಯಾಣ ಎಸ್ ಪಿ ರಾಜೇಶ್ ದುಗ್ಗಲ್ ಗೆ ಕರೆ ಮಾಡಿದ್ದವಾದರೂ ಕರೆ ಸ್ವೀಕರಿಸಿಲ್ಲ.  ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ಆರು ಜನ ಪೊಲೀಸರು ಹಾಗೂ ನಾಲ್ವರು ಗ್ರಾಮಸ್ಥರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಟ್ರಕ್ ನ ಸಹ ಚಾಲಕನನ್ನು ಥಳಿಸಿದರಾದರೂ ಆತ ಪರಾರಿಯಾಗಿದ್ದಾನೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com