ಚೆನ್ನೈ: ಭಾರಿ ವರ್ಷ ಧಾರೆಯಿಂದಾಗಿ ತಮಿಳುನಾಡಿನಲ್ಲಿ ಸುಮಾರು 50 ರೈಲುಗಳ ಸಂಚಾರ ರದ್ದಾಗಿದ್ದರೆ, 200 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಮಾಹಿತಿ ನೀಡಿದ್ದಾರೆ.
ಇಂತಹುದೊಂದು ಸಮಸ್ಯೆ ಕಳೆದ 100 ವರ್ಷಗಳಲ್ಲಿ ಇದೇ ಮೊದಲು. ತಮಿಳುನಾಡಿನ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸುಮಾರು 10 ಸಾವಿರ ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲಿಗಳನ್ನು ಪ್ರಯಾಣ ಸಾಧ್ಯವಾಗದೇ ಪರದಾಡುತ್ತಿರುವ ಪ್ರಯಾಣಿಕರಿಗೆ ಒದಗಿಸ ಲಾಗಿದೆ ಎಂದೂ ಅವರು ತಿಳಿಸಿದ್ದಾರೆ.