ಇಂಥ ಸ್ಥಿತಿಯಲ್ಲಿ ಮೂಕಪ್ರಾಣಿಗಳ ರೋದನಕ್ಕೆ ಕಿವಿಯಾದದ್ದು `ಹೋಟೆಲ್ ಫಾರ್ ಡಾಗ್ಸ್' ಎಂಬ ಸಂಸ್ಥೆ. ಚೆನ್ನೈ ಮೂಲದ ಈ ಸಂಸ್ಥೆಯು ಪ್ರವಾಹಪೀಡಿತ ಸ್ಥಳಗಳಲ್ಲಿನ ನಾಯಿಗಳನ್ನು ತನ್ನ ಬೆಂಗಳೂರಿನ ಹೋಟೆಲ್‍ಗೆ ಸ್ಥಳಾಂತರ ಮಾಡುತ್ತಿವೆ.
ಸಾಕುಪ್ರಾಣಿಗಳ ಮಾಲೀಕರು ಈ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದು, ತಮ್ಮ ಪ್ರಾಣಿಗಳ ಸುರಕ್ಷೆಯ ಹೊಣೆಯನ್ನು ಇವರಿಗೆ ವಹಿಸಿದ್ದಾರೆ. ಅದರಂತೆ, ನಾಯಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ.
ತಮಿಳು ನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಇವುಗಳನ್ನು ಮರಳಿ, ಮಾಲೀಕರಿಗೆ ಒಪ್ಪಿಸ ಲಾಗುವುದು ಎಂದು ಸಂಸ್ಥೆ ಹೇಳಿದೆ.