ಮತ್ತೆ ಚೆನ್ನೈನಲ್ಲಿ ಮಳೆ: ಹೆಚ್ಚಿದ ಆತಂಕ

ಚೆನ್ನೈನಲ್ಲಿ ಮಳೆ ಕೊಂಚ ಬಿಡುವು ಮಾಡಿಕೊಟ್ಟಿದ್ದು ಭಾನುವಾರ ಮತ್ತೆ ಮಳೆ ಆರಂಭಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ...
ಮಳೆ
ಮಳೆ
Updated on: 

ಚೆನ್ನೈ: ಚೆನ್ನೈನಲ್ಲಿ ಮಳೆ ಕೊಂಚ ಬಿಡುವು ಮಾಡಿಕೊಟ್ಟಿದ್ದು ಭಾನುವಾರ ಮತ್ತೆ ಮಳೆ ಆರಂಭಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಚೆನ್ನೈಯಿಂದ ಮೊದಲಿಗೆ ಚಾರ್ಟಡ್ ವಿಮಾನ ಗಗನಕ್ಕೆ ಹಾರಿತು ಬಳಿಕ 150 ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಪೋರ್ಟ್ ಬ್ಲೇರ್ಗೆ ಹಾರಿತು.

ಈ ಮಧ್ಯೆ ಚೆನ್ನೈ, ತಿರುವಳ್ಳೂರು, ಕಾಂಚೀಪುರ ಮತ್ತು ಕಡಲೂರಿನಲ್ಲೆ ಮತ್ತೆ ಆರಂಭವಾಗಿರುವ ಮಳೆ ಜನರಲ್ಲಿ ಆತಂಕವನ್ನು ಹುಟ್ಟುಹಾಕಿದೆ. ತಮಿಳುನಾಡು ಕರಾವಳಿಯಲ್ಲೂ ಸುರಿಯುತ್ತಿರುವ ಮಳೆ ಇನ್ನಷ್ಟು ಪ್ರದೇಶಗಳನ್ನು ಜಲಾವೃತಗೊಳಿಸುವ ಭೀತಿ ಮೂಡಿಸಿದೆ.

ಭಾರಿ ಮಳೆ ಪ್ರವಾಹಕ್ಕೆ ಈಗಾಗಲೇ ಅಂದಾಜು 450 ಜನ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com