ಉತ್ತರ ಪ್ರದೇಶದಲ್ಲಿ 28 ದಿನದ ಹಸುಗೂಸಿನ ಮೇಲೂ ಅತ್ಯಾಚಾರ

28 ದಿನದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಬುಲಂದ್ಶಹಾರ್ ನ ಅಸಿಫ್ ನಗ್ಲಾ ಹಳ್ಳಿಯಲ್ಲಿ ನಡೆದಿದೆ.
ಅತ್ಯಾಚಾರ
ಅತ್ಯಾಚಾರ

ಭುಲಂದ್ಶಹಾರ್: 28 ದಿನದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿರುವ ಹೇಯ ಕೃತ್ಯ  ಉತ್ತರ ಪ್ರದೇಶದ ಬುಲಂದ್ಶಹಾರ್ ನ ಅಸಿಫ್ ನಗ್ಲಾ ಹಳ್ಳಿಯಲ್ಲಿ ನಡೆದಿದೆ.

ಕಳೆದ ಶನಿವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಮತ ಚಲಾಯಿಸಲು ಹಸುಗೂಸಿನ ತಂದೆ ತಾಯಿಗಳು ತೆರಳಿದ್ದ ಸಂದರ್ಭದಲ್ಲಿ ಅದೇ ಹಳ್ಳಿಯ 25 ವರ್ಷದ ನಮಿನೊ ಎಂಬಾತ ಅತ್ಯಾಚಾರಿಸಿದ್ದಾನೆ ಎಂದು ಎಸ್ಪಿ ಪಂಕಜ್ ಪಾಂಡೆ ಹೇಳಿದ್ದಾರೆ.

ಅತಿಯಾದ ರಕ್ತಸ್ರಾವದಿಂದ ಮಗು ಬಳಲುತ್ತಿದ್ದನ್ನು ಗಮನಿಸಿದ ಪೋಷಕರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ ಈ ವೇಳೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದಾಗಿ ತಿಳಿದುಬಂದಿದೆ. ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ವೈದ್ಯರು ಸುಸರ್ಜಿತ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದ್ದಾರೆ.

ನಮಿನೊ ವಿರುದ್ಧ ಮಗುವಿನ ತಂದೆ ಮುಖೇಶ್ ಎಂಬುವರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com