2. ಸಂಜೀವ್ ನಂದಾ (1999) ಕೇಸ್ ಅಡ್ಮಿರಲ್ ಎಸ್‍ಎಂ ನಂದಾ ಅವರ ಮೊಮ್ಮಗ ಸಂಜೀವ್ ನಂದಾ ಅವರು 1999ರ ಜ.10ರಂದು ದೆಹಲಿಯ ಲೋಧಿ ರಸ್ತೆಯ ಚೆಕ್‍ಪಾಯಿಂಟ್ ನಲ್ಲಿ ತಮ್ಮ ಬಿಎಂಡಬ್ಲ್ಯೂ ಕಾರನ್ನು ಡಿಕ್ಕಿ ಹೊಡೆಸಿ, ಮೂವರು ಪೊಲೀಸರು ಸೇರಿದಂತೆ 6 ಮಂದಿಯ ಸಾವಿಗೆ ಕಾರಣರಾಗಿದ್ದರು. ಆರಂಭದಲ್ಲಿ ವಿಚಾರಣಾ ನ್ಯಾಯಾಲಯವು ನಂದಾರನ್ನು ಖುಲಾಸೆಗೊಳಿಸಿತ್ತು. ಆದರೆ, ಈ ತೀರ್ಪಿನ ವಿರುದ್ಧದ ಆಕ್ರೋಶವು ವ್ಯಾಪಿಸಿದ ಬಳಿಕ, 2008ರಲ್ಲಿ ಮರು ವಿಚಾರಣೆ ನಡೆಸಿ, ನಂದಾ ಅವರನ್ನು ದೋಷಿ ಎಂದು ಕೋರ್ಟ್ ತೀರ್ಪಿತ್ತಿತು. ಜತೆಗೆ 2 ವರ್ಷ ಜೈಲುಶಿಕ್ಷೆಯನ್ನೂ ವಿಧಿಸಿತು.