
ಬೆಂಗಳೂರು: ರಾಜಕಾರಣದಲ್ಲಿ ಇರಬೇಕಾದರೆ ಅಂತವರು ಸಂವೇದನಾ ಶೂನ್ಯತೆಯನ್ನು ರೂಢಿಗತ ಮಾಡಿಕೊಂಡಿರಬೇಕು . ಈ ಮಾತನ್ನು ಹೇಳಿರುವುದು ದೇಶದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಕಂಪನಿಯ ಅಜೀಂ ಪ್ರೇಮಜಿ.
ಇಲ್ಲಿನ ಐಐಎಂನಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ನಾನು ರಾಜಕಾರಣ ಏಕೆ ಪ್ರವೇಶಿಸಿಲ್ಲ? ಏಕೆಂದರೆ ಅದು ನನ್ನನ್ನು ಎರಡು ವರ್ಷಗಳಲ್ಲೇ ಕೊಲ್ಲುತ್ತದೆ. ರಾಜಕಾರಣದಲ್ಲಿ ಇರಬೇಕಾದರೆ ಸಂವೇದನೆ ಇಲ್ಲದಿರುವಿಕೆಯನ್ನು ರೂಡಿs ಮಾಡಿಕೊಂಡಿರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜಕಾರಣದಲ್ಲಿ ಪರಿಣಿತ, ಜ್ಞಾನವಂತರು ಮತ್ತು ಜನಸೇವೆ ಮನೋಭಾವ ಹೊಂದಿರುವವರ ಕೊರತೆ ಇದೆ. ಹಾಗಾಗಿ ಸರ್ಕಾರ ಮತ್ತು ರಾಜಕಾರಣ ಪ್ರವೇಶಿಸುವವರನ್ನು ಪ್ರೊತ್ಸಾಹಿಸಬೇಕು . ಆದರೆ ಅವರು ಮೊದಲು ಮಾನಸಿಕವಾಗಿ ದೃಢವಾಗಿರಬೇಕು ಎಂದಿದ್ದಾರೆ.
ಜನಸೇವೆಗಾಗಿ ಅಪಾರ ಹಣವನ್ನು ನೀಡುತ್ತಿದ್ದೀರ. ಈ ಸಂದರ್ಭದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ ಏನು ಎಂಬ ಪ್ರಶ್ನೆಗೆ, ಸಮಸ್ಯೆಯ ಗಾತ್ರ, ಆಳ ಮತ್ತು ಅದರ ವ್ಯಾಪ್ತಿ ನಾವು ಎದುರಿಸುತ್ತಿರು ವ ಪ್ರಮುಖ ಸಮಸ್ಯೆ ಎಂದಿದ್ದಾರೆ. ದೊಡ್ಡ ಪ್ರಮಾಣದ ಯೋಜನೆಗಳನ್ನು ಹೊಂದಿದ್ದರೂ ಅನುಷ್ಠಾನ ಸಂಸ್ಥೆಗಳ ಮೇಲೆ ಅವಲಂಬಿಸಬೇಕಾಗಿರುವುದರಿಂದ ಅಂತಿಮ ಹಂತಕ್ಕೆ ಮು್ಟ ಸಾಧ್ಯವಾಗುತ್ತಿಲ್ಲ ಇಡೀ ಸಮಸ್ಯೆ ಯ ಸಣ್ಣ ಸಮಸ್ಯೆಯನ್ನಷ್ಟೆ ತಲುಪಲು ಸಾಧ್ಯವಾಗುತ್ತಿದೆ. ಇದು ತುಂಬಾ ಬೇಸರ ಮೂಡಿಸಿದೆ, ಹಣ ಇದ್ದರೂ ವಿಶಾಲವಾಗಿ ಮುನ್ನಡೆಯಲು ಆಗುವುದಿಲ್ಲ ಎಂದಿದ್ದಾರೆ.
Advertisement