ಮೌಢ್ಯ ನಿವಾರಣೆಗೆ ವಿಧವೆ ಮಾಡಿದ ಅಡುಗೆ ತಿಂದ ಜಿಲ್ಲಾಧಿಕಾರಿ

ದೇಶದಲ್ಲಿ ಮೌಢ್ಯಾಚರಣೆ ಇನ್ನು ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪ್ರಾತ್ಯಕ್ಷಿಕ ಘಟನೆ ಬೇಕಿಲ್ಲ. ವಿಧವೆ ಎಂಬ ಕಾರಣಕ್ಕೆ ಆಕೆಯನ್ನು ಶಾಲೆಯಿಂದಲೇ ಬಹಿಷ್ಕಾರ ಮಾಡಿದ ಘಟನೆಯೊಂದು ಬಿಹಾರದ ಗೋಪಾಲ್ಗಂಜ್ ನಲ್ಲಿ ನಡೆದಿದೆ...
ಮೌಢ್ಯ ನಿವಾರಣೆಗೆ ವಿಧವೆ ಮಾಡಿದ ಅಡುಗೆ ತಿಂದ ಜಿಲ್ಲಾಧಿಕಾರಿ
ಮೌಢ್ಯ ನಿವಾರಣೆಗೆ ವಿಧವೆ ಮಾಡಿದ ಅಡುಗೆ ತಿಂದ ಜಿಲ್ಲಾಧಿಕಾರಿ

ಬಿಹಾರ: ದೇಶದಲ್ಲಿ ಮೌಢ್ಯಾಚರಣೆ ಇನ್ನು ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪ್ರಾತ್ಯಕ್ಷಿಕ ಘಟನೆ ಬೇಕಿಲ್ಲ. ವಿಧವೆ ಎಂಬ ಕಾರಣಕ್ಕೆ ಆಕೆಯನ್ನು ಶಾಲೆಯಿಂದಲೇ ಬಹಿಷ್ಕಾರ ಮಾಡಿದ ಘಟನೆಯೊಂದು ಬಿಹಾರದ ಗೋಪಾಲ್ಗಂಜ್ ನಲ್ಲಿ ನಡೆದಿದೆ.

ವಿಧವೆಯೊಬ್ಬಳು ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದು, ಆಕೆಯನ್ನು ಶಾಲೆಯ ಕೆಲಸದಿಂದ ತೆಗೆದುಹಾಕಬೇಕೆಂದು ಹಾಗೂ ಶಾಲೆಯನ್ನೇ ಮುಚ್ಚಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ. ಸ್ಥಳೀಯರ ಆಗ್ರಹದ ಮೇರೆಗೆ ಶಾಲಾಧಿಕಾರಿಗಳು ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.

ಇದರಿಂದ ನೊಂದ ಮಹಿಳೆ ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮೆಟ್ಟಿಲು ಹತ್ತಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಮಹಿಳೆಯ ನೋವನ್ನು ಕೇಳಿದ ಅಲ್ಲಿನ ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಅವರು ಇಂದು ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಅಧಿಕಾರಿ ಅವರನ್ನು ಸಮಾಧಾನಪಡಿಸಿ ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ಜನರಲ್ಲಿರುವ ಮೌಢ್ಯವನ್ನು ಹೋಗಾಲಾಡಿಸುವುದಕ್ಕಾಗಿ ವಿಧವಾ ಮಹಿಳೆ ಮಾಡಿದ ಅಡುಗೆಯನ್ನು ಎಲ್ಲರ ಸಮಕ್ಷಮದಲ್ಲಿ ತಿಂದು ತೋರಿಸಿದ್ದಾರೆ.

ಇದೀಗ ಜಿಲ್ಲಾಧಿಕಾರಿಯ ಮಾತುಗಳನ್ನು ಕೇಳಿರುವ ಅಲ್ಲಿನ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದು, ಶಾಲೆ ಎಂದಿನಂತೆ ನಡೆಯಲು ಬಿಟ್ಟಿದ್ದಾರೆ. ಅಲ್ಲದೆ, ಮಹಿಳೆಯು ಮತ್ತೆ ಶಾಲೆಯಲ್ಲಿ ಕೆಲಸ ಮಾಡಲು ಅನುಮತಿ ನೀಡಿದ್ದಾರೆ.

ಕಲ್ಯಾಣ್ಪುರದಲ್ಲಿರುವ ಈ ಶಾಲೆಯಲ್ಲಿ 1ನೇ ತರಗತಿಯಿಂದ 8 ತರಗತಿಯವರೆಗೂ ಒಟ್ಟು 734 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಧವಾ ಮಹಿಳೆಗೆ ಇಬ್ಬರು ಮಕ್ಕಳಿದ್ದು,  ಶಾಲೆಯಲ್ಲಿ ಒಟ್ಟು 5 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಶಾಲೆಯ ಅಧಿಕಾರಿಗಳು ಈ ಮಹಿಳೆಯರಿಗೆ ತಿಂಗಳಿಗೆ ರು.1000 ವೇತನವನ್ನು ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com