ಕಲಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್, ನಾವು ಎಸ್‌ಸಿ /ಎಸ್‌ಟಿ ಮಸೂದೆಯನ್ನು ಅಂಗೀಕರಿಸಬೇಕೆಂದು ಬಯಸುತ್ತೇವೆ. ಬಾಲಾಪರಾಧಿ ನ್ಯಾಯ ಮಸೂದೆಯನ್ನು ಇಲ್ಲಿ ಪ್ರಸ್ತಾಪಿಸಬೇಕೆಂದು ನಾನು ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದೆ. ಆದರೆ ಮಾಧ್ಯಮಗಳ ವರದಿ ಕಾರಣ, ಸರ್ಕಾರ ಅದನ್ನೀಗ ಸಪ್ಲಿಮೆಂಟರಿ ಬೇಡಿಕೆಯ ಪಟ್ಟಿಯಲ್ಲಿರಿಸಿದೆ. ಇಷ್ಟೆಲ್ಲಾ ಮಾಡಿಯಾದ ಮೇಲೆ ನಾವು ಸಭೆಯಲ್ಲಿ ಮಸೂದೆ ಮಂಡಿಸಿದ್ದೇವೆ, ವಿಪಕ್ಷಗಳು ಅದಕ್ಕೆ ತಡೆಯೊಡ್ಡಿದೆ ಎಂದು ಹೇಳುತ್ತೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.