

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರನ್ನು ಪ್ರತಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿ ಜಾರ್ಖಂಡ್ ಇಸ್ಪಾತ್ ಪ್ರೈ.ಲಿ.(ಜೆಐಪಿಎಲ್) ನಿರ್ದೇಶಕ ಆರ್ ಎಸ್ ರುಂಗ್ಟಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ವಿಶೇಷ ಕೋರ್ಟ್ ಬುಧವಾರ ವಜಾ ಮಾಡಿದೆ.
ಕಲ್ಲಿದ್ದಲು ಸಚಿವಾಲಯದ ದಾಖಲೆಗಳು ಮತ್ತು ಸ್ಕ್ರೀನಿಂಗ್ ಸಮಿತಿ ರಚನೆ ಕುರಿತು ತಾವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಿಂಗ್‍ರೇ ಖುದ್ದು ಹಾಜರಾಗಿ ವಿವರಿಸುವಂತೆ ಆದೇಶಿಸಬೇಕಾಗಿ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ, ಈ ಮನವಿಯನ್ನು ವಿಶೇಷ ಕೋರ್ಟ್ ತಿರಸ್ಕರಿಸಿದೆ.