ಮೋದಿ 24x 7 ಕೆಲಸ ಮಾಡ್ತಾರೆ, ಅಧಿಕಾರಕ್ಕೇರಿದ ನಂತರ ರಜಾ ತೆಗೆದುಕೊಂಡೇ ಇಲ್ಲ

ಮೋದಿಯವರು ಮೇ 26, 2014ರಂದು ಅಧಿಕಾರಕ್ಕೇರಿದ ನಂತರ ಇಲ್ಲಿಯವರೆಗೆ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ:  2014ರಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ನಾನು ಅಧಿಕಾರಕ್ಕೇರಿದರೆ ವಿಶ್ರಾಂತಿ ತೆಗೆದುಕೊಳ್ಳದೆ ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದರು. ಅಧಿಕಾರಕ್ಕೇರಿದ ನಂತರ ಮೋದಿ ಈ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ.
ಮಾಧ್ಯಮವೊಂದರ ವರದಿ ಪ್ರಕಾರ  ಮೋದಿಯವರು ಮೇ 26, 2014ರಂದು ಅಧಿಕಾರಕ್ಕೇರಿದ ನಂತರ ಇಲ್ಲಿಯವರೆಗೆ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲವಂತೆ.
ಮೋದಿ ಬಗ್ಗೆ ಆರ್‌ಟಿಐ ಮೂಲಕ ಪ್ರಶ್ನೆ ಕೇಳಲಾಗಿದ್ದು, ಈ ಪ್ರಶ್ನೆಗೆ ಪ್ರಧಾನಿಮಂತ್ರಿಯವರ ಕಾರ್ಯಾಲಯ ಉತ್ತರ ನೀಡಿದೆ.
ಅಷ್ಟೇ ಅಲ್ಲ ಮೋದಿ ಪ್ರತೀ ದಿನ ಕಾರ್ಯ ನಿರತರಾಗಿರುತ್ತಾರೆ ಎಂದು ಹೇಳಿರುವ ಕಾರ್ಯಾಲಯ ಮೋದಿಯವರ ಕಚೇರಿ ಸಮಯವನ್ನೂ ಬಹಿರಂಗ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com