2016 ರಲ್ಲಿ ವಿದೇಶ ಪ್ರವಾಸ ಕಡಿಮೆ ಮಾಡಲು ಮೋದಿ ನಿರ್ಣಯ

ತೀವ್ರ ಟೀಕೆಗಳ ನಂತರ ಕೊನೆಗೂ ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ....
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ನವದೆಹಲಿ: ತೀವ್ರ ಟೀಕೆಗಳ ನಂತರ ಕೊನೆಗೂ ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ತುಂಬಾ ಅಗತ್ಯವಿರುವ  ಕಾರ್ಯಕ್ರಮ ಹಾಗೂ ಭೇಟಿಗಳಿಗೆ ಮಾತ್ರ ವಿದೇಶಕ್ಕೆ ತೆರಳಲು ನಿರ್ಣಯ ಕೈ ಗೊಂಡಿದ್ದಾರೆ.

ವಿದೇಶ ಪ್ರವಾಸಗಳನ್ನು ಆದಷ್ಟು ಕಡಿಮೆ ನಿಗದಿಪಡಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಮೋದಿ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸ್ಪಂದಿಸಿರುವ ವಿದೇಶಾಂಗ ಸಚಿವಾಲಯ 2016ರ ಜೂನ್​ವರೆಗೆ ಕೇವಲ ಎರಡು ವಿದೇಶ ಪ್ರವಾಸ ಮಾತ್ರ ನಿಗದಿಪಡಿಸಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ 19 ತಿಂಗಳಲ್ಲಿ 33 ದೇಶಗಳಿಗೆ ಭೇಟಿ ನೀಡಿದ್ದು, ವಿಶ್ವದ 2ನೇ 3ರಷ್ಟು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com