ಭವಿಷ್ಯದ ಮಂಗಳಯಾನಕ್ಕೆ ಅಣುಶಕ್ತಿ ಚಾಲಿತ ರಾಕೆಟ್!

ಇನ್ನು ಬಾಹ್ಯಾಕಾಶ ಯಾತ್ರೆ ಗಳಿಗೂ ಪರಮಾಣುವಿಗೂ ಏನು ಸಂಬಂಧ ಎಂದು ಕೇಳುವಂತಿಲ್ಲ. ಏಕೆಂದರೆ, ವಿಜ್ಞಾನಿಗಳ ಭವಿಷ್ಯದ ...
ಅಣುಶಕ್ತಿ ಚಾಲಿತ ರಾಕೆಟ್ ನ ಮಾದರಿ (ಕೃಪೆ : ನಾಸಾ)
ಅಣುಶಕ್ತಿ ಚಾಲಿತ ರಾಕೆಟ್ ನ ಮಾದರಿ (ಕೃಪೆ : ನಾಸಾ)
Updated on: 

ಲಂಡನ್: ಇನ್ನು ಬಾಹ್ಯಾಕಾಶ ಯಾತ್ರೆ ಗಳಿಗೂ ಪರಮಾಣುವಿಗೂ ಏನು ಸಂಬಂಧ ಎಂದು ಕೇಳುವಂತಿಲ್ಲ. ಏಕೆಂದರೆ, ವಿಜ್ಞಾನಿಗಳ ಭವಿಷ್ಯದ ಬಾಹ್ಯಾಕಾಶ ಕನಸುಗಳಿಗೆ `ಪರಮಾಣು' ಭಾರಿ ಕೊಡುಗೆ ನೀಡಲಿದೆ. ಹೌದು. ಸೌರವ್ಯೂಹದ ಮೂಲೆ ಮೂಲೆಗೂ ಗಗನಯಾತ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವ ನಾಸಾ ವಿಜ್ಞಾನಿಗಳು, ಅದಕ್ಕಾಗಿ ಹೊಸ ಅಣುಶಕ್ತಿ ಚಾಲಿತ ರಾಕೆಟ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅಣುವಿದಳನ ಶಕ್ತಿಯನ್ನು ಬಳಸಿ ರಾಕೆಟ್ ಚಲಿಸುವಂತೆ ಮಾಡುವುದುಇವರ ಉದ್ದೇಶ. ಸಾಂಪ್ರದಾಯಿಕ ಕೆಮಿಕಲ್ ಗಳ ಮೂಲಕ ಚಲಿಸುವ ರಾಕೆಟ್‍ಗೆ ಹೋಲಿಸಿದರೆ ಅಣುಶಕ್ತಿಯಿಂದ ಚಲಿಸುವ ರಾಕೆಟ್‍ನ ವೇಗ ಹೆಚ್ಚಿರುತ್ತದೆ. ಹೀಗಾಗಿಸಮಯ ವ್ಯರ್ಥವಾಗುವುದನ್ನು ತಡೆಯಬಹುದು ಎನ್ನುವುದು ವಿಜ್ಞಾನಿಗಳ ವಾದ.

೨033ರ ಮಂಗಳಯಾನಕ್ಕೆ: 2033ರ ಮಂಗಳಯಾನಕ್ಕಾಗಿ ನಾಸಾ ಈ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅಣು ಶಾಖೋತ್ಪನ್ನ ರಾಕೆಟ್‍ಗಳು ಕೆಮಿಕಲ್ರಾಕೆಟ್‍ಗಳಿಗಿಂತ ಹೆಚ್ಚು ತೂಕವನ್ನು ಹೊರಬಲ್ಲದು. ಹೀಗಾಗಿ ಬಾಹ್ಯಾಕಾಶ ನೌಕೆ ಹೆಚ್ಚು ತೂಕದ ಸರಕನ್ನು ಹೊತ್ತುಕೊಂಡು ಅತಿ ಕಡಿಮೆ ಅವಧಿಯಲ್ಲಿ ಕೆಂಪು ಗ್ರಹವನ್ನು ತಲುಪಲು ಸಾಧ್ಯ. ಇಲ್ಲಿ ರಿಯಾಕ್ಟರ್ ನೊಳಗಿನ ದ್ರವರೂಪದ ಜಲಜನಕವನ್ನು ಕಾಯಿಸಲು ಯುರೇನಿಯಂ-235 ಅಣು ರಿಯಾಕ್ಷನ್‍ಗಳನ್ನು ಬಳಸಲಾಗುತ್ತದೆ. ಈ ಮೂಲಕ ಜಲಜನಕವನ್ನು ಅಯಾನೀಕರಿಸಿದ ಜಲಜನಕದ ಅನಿಲವನ್ನಾಗಿ ಅಥವಾ ಪ್ಲಾಸ್ಮಾವನ್ನಾಗಿ ಬದಲಾಯಿಸಲಾಗುತ್ತದೆ. ನಂತರ ಈ ಪ್ಲಾಸ್ಮಾವನ್ನು ರಾಕೆಟ್‍ನ ಮೂತಿಯಲ್ಲಿ ಹರಿಯುವಂತೆ ಮಾಡಿ ಒತ್ತಡ ಸೃಷ್ಟಿಸಲಾಗುತ್ತದೆ ಎನ್ನುತ್ತಾರೆ ನಾಸಾ ವಿಜ್ಞಾನಿಗಳು.

ಇದಕ್ಕಾಗಿ ಕಾಪರ್ನಿಕಸ್ ಎಂಬ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಪ್ರತ್ಯೇಕ ಸರಕು ಮತ್ತು ಗಗನಯಾತ್ರಿಗಳ ಸಂಚಾರ ವಾಹನವಿದ್ದು, ಇವುಗಳೆರಡೂ ಅಣುಶಕ್ತಿಯಿಂದ ಸಂಚರಿಸುವಂಥದ್ದು. ಇದರಲ್ಲಿ ಮೂರು ಎಂಜಿನಿಗಳಿರುತ್ತವೆ. ಒಟ್ಟಾರೆ ಇದು ಮಂಗಳ ಗ್ರಹದ 40 ದಶಲಕ್ಷ ಮೈಲು ಪ್ರಯಾಣವನ್ನು ಕೇವಲ 100 ದಿನಗಳಲ್ಲಿ ಪೂರೈಸಬಲ್ಲದು. ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹವನ್ನು ತಲುಪಲು ಬರೋಬ್ಬರಿ 253 ದಿನಗಳನ್ನು ತೆಗೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com