ಅಸ್ಸಾಂನಲ್ಲಿ ಗ್ರೆನೇಡ್ ಸ್ಫೋಟ: ಇಬ್ಬರು ಸಾವು

ಗ್ರೆನೇಡ್ ಸ್ಫೋಟ
ಗ್ರೆನೇಡ್ ಸ್ಫೋಟ

ಶಿವ್‌ಸಾಗರ್: ಅಸ್ಸಾಂನ ಶಿವ್‌ಸಾಗರ್ ಜಿಲ್ಲೆಯ ಸೆಪೊನ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಗ್ರೆನೇಡ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.  

ಅಪರಿಚಿತರಿಬ್ಬರು ಸೈಕಲ್ ಮೇಲೆ ಬಂದು ಸೆಪೊನ್‌ನ ಖ್ಯಾತ ಉದ್ಯಮಿ ಬೈರೆನ್ ಅಗರ್ವಾಲ್ ಅವರ ಜೆ.ಸಿ.ರಸ್ತೆ ನಿವಾಸದತ್ತ ಗ್ರೆನೇಡ್ ಎಸೆದಿದ್ದಾರೆ. ಗ್ರೆನೇಡ್ ಸ್ಫೋಟದಲ್ಲಿ ಬೈರೋನ್ ಅಗರ್ವಾಲ್ ಸಹೋದರ ಸಿತೂ ಅಗರ್ವಾಲ್ ಹಾಗೂ ಅವರ ಕಾರು ಚಾಲಕ ದಿಂಚೀಶ್ವರ್ ಭೂಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೋಯ್ ಕುಲಿಗ್ರಾಂ ಅವರು ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಉಲ್ಫಾ ಉಗ್ರರ ಕೃತ್ಯ ಇರಬಹುದೆಂದು ಸಾರ್ವಜನಿಕರು ಶಂಕಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.  ಕೆಂಪು ಉಗ್ರರು ಅಗರ್ವಾಲ್ ಅವರಿಂದ ಹಣ ಸುಲಿಗೆಗೆ ಯತ್ನಿಸಿದ್ದರು. ಆದರೆ ಅಗರ್ವಾಲ್ ಹಣ ನೀಡಿರಲಿಲ್ಲ. ಇದೇ ಕಾರಣಕ್ಕಾಗಿ ದುಷ್ಕರ್ಮಿಗಳು ಕೃತ್ಯ ಎಸಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com