ಪ್ರಧಾನಿ ನರೇಂದ್ರ ಮೋದಿ ಸೂಟ್‌ಗೆ 1 ಕೋಟಿ ಬಿಡ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ 'ಸೂಟ್‌' ಬುಧವಾರ ಹರಾಜಿಗೆ ಹಾಕಲಾಗಿದ್ದು, ಬರೋಬ್ಬರಿ 1 ಕೋಟಿ ರುಪಾಯಿಗೆ ಬಿಡ್ ಮಾಡಲಾಗಿದೆ.
ಹರಾಜಿನಲ್ಲಿ ಮೋದಿ ಸೂಟ್‌
ಹರಾಜಿನಲ್ಲಿ ಮೋದಿ ಸೂಟ್‌

ಸೂರತ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ 'ಸೂಟ್‌' ಬುಧವಾರ ಹರಾಜಿಗೆ ಹಾಕಲಾಗಿದ್ದು, ಬರೋಬ್ಬರಿ 1 ಕೋಟಿ ರುಪಾಯಿಗೆ ಬಿಡ್ ಮಾಡಲಾಗಿದೆ.

ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಅದರ ವಿಶೇಷತೆಯಾಗಿದ್ದು, ಒಬಾಮ ಭೇಟಿ ವೇಳೆ ಈ ಸೂಟ್ ಪ್ರಮುಖ ಆಕರ್ಷಣೆಯಾಗಿತ್ತು.

ಸದ್ಯ ಸೂರತ್‌ನಲ್ಲಿ ಮೋದಿ ಸೂಟ್ ಸೇರಿದಂತೆ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಾಗ ಮತ್ತು ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಉಡುಗೊರೆಗಳನ್ನು ಹರಾಜಿಗೆ ಹಾಕಲಾಗಿದ್ದು, ಸುರೇಶ್ ಅಗರವಾಲ್ ಎಂಬುವವರು ಮೋದಿ ಸೂಟ್‌ಗೆ 1 ಕೋಟಿ ರುಪಾಯಿ ಬಿಡ್ ಮಾಡಿದ್ದಾರೆ.

ಈ ಮುಂಚೆ ಬಿಡ್ ಮಾಡಿದ್ದ ಬಿಜೆಪಿ ನಾಯಕ ರಾಜುಭಾಯಿ ಅಗರವಾಲ್ ಅವರು 51 ಲಕ್ಷ ಕೂಗಿದ್ದರು. ಮೋದಿ ಸೂಟ್‌ಗೆ 11 ಲಕ್ಷದಿಂದ ಬಿಡ್ ಆರಂಭವಾಗಿದ್ದು, ಈಗ 1 ಕೋಟಿಗೆ ಬಂದು ನಿಂತಿದೆ. ಕೇಂದ್ರ ಸರ್ಕಾರ ಆಯೋಜಿಸಿರುವ ಈ ಹರಾಜು ಮೇಳ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ಈ ಹರಾಜಿನಿಂದ ಬಂದ ಹಣವು ನಮಾಮಿ ಗಂಗೆ ಟ್ರಸ್ಟ್‍ಗೆ ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದೂ ಕೇಂದ್ರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com