2ಜಿ ದರ ನಿಗದಿಗೆ ಸಂಪುಟ ಅಸ್ತು

ಫೆಬ್ರವರಿ 23ರಂದು ಹರಾಜಾಗಲಿರುವ 2ಜಿ ತರಂಗಾಂತರದ ಮೀಸಲು ದರವನ್ನು...
2ಜಿ ದರ ನಿಗದಿಗೆ ಸಂಪುಟ ಅಸ್ತು
Updated on: 

ನವದೆಹಲಿ: ಫೆಬ್ರವರಿ 23ರಂದು ಹರಾಜಾಗಲಿರುವ 2ಜಿ ತರಂಗಾಂತರದ ಮೀಸಲು ದರವನ್ನು ಕೇಂದ್ರ ಸಂಪುಟ ಸೋಮವಾರ ಅಂತಿಮಗೊಳಿಸಿದೆ. ಇದು ಈವರೆಗಿನ ಅತಿದೊಡ್ಡ ಹರಾಜು ಆಗಿದ್ದು, ಸರ್ಕಾರದ ಬೊಕ್ಕಸಕ್ಕೆ ರು.64,840 ಕೋಟಿ ಆದಾಯ ಬರುವ ನಿರೀಕ್ಷೆಯಿದೆ.

ಈ ಪೈಕಿ ರು.16 ಸಾವಿರ ಕೋಟಿ ಆದಾಯವು ಪ್ರಸಕ್ತ ವಿತ್ತೀಯ ವರ್ಷದಲ್ಲೇ ಸರ್ಕಾರದ ಕೈಸೇರುವ ಸಾಧ್ಯತೆಯಿದೆ. 800 ಮೆಗಾ ಹರ್ಟ್ಸ್ನ ಸ್ಪೆಕ್ಟ್ರಂಗೆ ಒಂದು ಮೆಗಾ ರು.3,646 ಕೋಟಿ, 1800 ಮೆಗಾ ಹರ್ಟ್ಸ್ಗೆ ರು.2,191 ಕೋಟಿ ಎಂದು ಕನಿಷ್ಠ ದರ ನಿಗದಿಪಡಿಸಿ ಟೆಲಿಕಮ್ಯೂನಿಕೇಷನ್ ಇಲಾಖೆಯು ಸಲ್ಲಿಸಿದ ಪ್ರಸ್ತಾಪಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ಇದೇ ವೇಳೆ, 2,100 ಮೆಗಾ ಹರ್ಟ್ಸ್ನ ಮೀಸಲು ದರವನ್ನು ಸರ್ಕಾರ ಘೋಷಿಸಿಲ್ಲ. ಫೆಬ್ರವರಿ 2014ರಲ್ಲಿ ನಡೆದ ಹರಾಜಿನಲ್ಲಿ ಸರ್ಕಾರಕ್ಕೆ ರು.62,162 ಕೋಟಿ ಆದಾಯ ಬಂದಿತ್ತು. ಪ್ರಸಕ್ತ ವರ್ಷದ ಹರಾಜಿನಿಂದ ಉತ್ತಮ ಆದಾಯ ಬಂದರೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.1ಕ್ಕೆ ಇಳಿಸುವ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com