

ಮುಂಬೈ: ಯಾವುದೇ ಕಾರಣಕ್ಕೂ ಮಹಾರಾಷ್ಟ್ರದಿಂದ ಮುಂಬೈ ನಗರವನ್ನು ಬೇರ್ಪಡಿಸಲು ಶಿವಸೇನೆ ಬಿಡುವುದಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ಮರಾಠಿಯ 'ಬಲ್‌ಕಡು' ಚಿತ್ರದ ಟ್ರೇಲರ್‌ನ್ನು ಬಿಡುಗಡೆ ಮಾಡಿದ ಉದ್ಧವ್ ಠಾಕ್ರೆ, ಶಿವಸೇನೆ ಮಹಾರಾಷ್ಟ್ರದ ಭಾಗವಾಗಿರದಿದ್ದರೆ ಬಹಳ ಹಿಂದೆಯೇ ರಾಜ್ಯವನ್ನು ಛಿದ್ರಗೊಳಿಸಿ ಬಿಡುತ್ತಿದ್ದರು. ಈಗ ಯಾರಿಗೂ ಮಹಾರಾಷ್ಟ್ರದಿಂದ ಮುಂಬೈಯನ್ನು ಬೇರ್ಪಡಿಸಲು ಧೈರ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಕಿಡಿಕಾರಿರುವ ಠಾಕ್ರೆ, ಮಹಾರಾಷ್ಟ್ರವನ್ನು ಪ್ರತ್ಯೇಕ ರಾಜ್ಯವಾಗಿಸಬೇಕು ಎಂದು ಹೇಳುವ ಜನರು ಮುಂದೆ ಬಂದು ಹೋರಾಟ ಮಾಡಲು ಧೈರ್ಯ ಮಾಡುತ್ತಿಲ್ಲ. ಶಿವಸೇನೆ ಇಲ್ಲದಿದ್ದರೆ ಮಹಾರಾಷ್ಟ್ರದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಆಲೋಚಿಸಬೇಕು. ಈ ಬಗ್ಗೆ ಶಿವಸೇನೆಯ ಎಲ್ಲಾ ಸದಸ್ಯರಲ್ಲೂ ಆಲೋಚನೆಗಳು ಬಂದಿದ್ದು, ಪ್ರತ್ಯೇಕ ರಾಜ್ಯ ಕುರಿತಂತೆ ಎಲ್ಲರೂ ಒಟ್ಟಾಗಿ ಸೇರಿ ಕೇಸರಿ ಧ್ವಜವಿಡಿದು ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ.