ಅಸ್ಸಾಂನಲ್ಲಿ ಇಬ್ಬರು ಉಗ್ರರ ಬಂಧನ: ಸ್ಫೋಟಕವಸ್ತುಗಳು ವಶ

2 ನಾಡ ಬಂದೂಕು, ಎಕೆ-47, ಗುಂಡುಗಳು ಸೇರಿದಂತೆ 8 ಕೆಜಿ ಸ್ಪೋಟಕ ವಸ್ತುಗಳನ್ನು...
ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ವಶ
ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ವಶ

ಗುವಾಹಟಿ: ಅಸ್ಸಾಂನ್ ಕೋಕ್ರಾಜರ್ ಜಿಲ್ಲೆಯಲ್ಲಿ ಇಬ್ಬರು ಎನ್‌ಡಿಎಫ್‌ಬಿ-ಸಾಂಗ್‌ಬಿಜಿತ್ ಉಗ್ರರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದು, ಅವರಿಂದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಇಬ್ಬರು ಉಗ್ರರರನ್ನು ಮೊಹಮ್ಮದ್ ಜೊಯನಾಲ್(32), ಅಬ್ದುಲ್ ಕರೀಂ(18) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಸಾಂಗ್‌ಬಿಜಿತ್ ಉಗ್ರ ಗೊಂಗಾರ್ ಎಂಬಾತನನ್ನು ಅಸ್ಸಾಂ ಪೊಲೀಸರು ಬಂಧಿಸಿ, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆ ವೇಳೆ ಆತ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೋಕ್ರಾಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲ್ಪಟ್ಟ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರರನ್ನು ಪೊಲೀಸರು ಬಂಧಿಸಿದರು. ಬಂಧಿತರಿಂದ 2 ನಾಡ ಬಂದೂಕು, ಎಕೆ-47, ಗುಂಡುಗಳು ಸೇರಿದಂತೆ 8 ಕೆಜಿ ಸ್ಪೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com