ಎನ್‌ಆರ್‌ಐಗಳಿಗೆ ಇ-ಓಟಿಂಗ್ ಅವಕಾಶ

ಭಾರತದ ಎಲ್ಲ ಚುನಾವಣೆಗಳಲ್ಲಿ ವಿದೇಶಗಳಲ್ಲಿದ್ದುಕೊಂಡೆ ಮತ ಚಲಾಯಿಸಬಹುದಾಗಿದೆ...
ಇ-ಓಟಿಂಗ್ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ
ಇ-ಓಟಿಂಗ್ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ
Updated on: 

ನವದೆಹಲಿ: ವಿದೇಶಗಳಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅನಿವಾಸಿ ಭಾರತೀಯರು ಇನ್ನು ಮುಂದೆ ಭಾರತದಲ್ಲಿ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸಬಹುದು. ಇನ್ನುಮುಂದೆ ವಿದೇಶದಲ್ಲಿದ್ದುಕೊಂಡೆ ಈ ಓಟಿಂಗ್ ಮೂಲಕ ತಮ್ಮ ಮತ ಚಲಾಯಿಸಬಹುದು.

ಇ-ಬ್ಯಾಲೆಟ್ ಮೂಲಕ ಎನ್‌ಐಆರ್‌ಗಳಿಗೆ ಮತಚಲಾಯಿಸುವ ಹಕ್ಕು ನೀಡುವ ಕುರಿತು, ಕೇಂದ್ರ ಚುನಾವಣಾ ಆಯೋಗ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಅಲ್ಲದೆ ಈ ಕುರಿತು ಇಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸುಪ್ರೀಂ ಕೋರ್ಟ್ ಸಹಾ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಮುಂದಿನ 8 ವಾರಗಳಲ್ಲಿ ಇ-ಓಟಿಂಗ್‌ಗೆ ಅವಕಾಶ ಕಲ್ಪಿಸುವಂತೆ  ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅನಿವಾಸಿ ಭಾರತೀಯರ ಅಭಿವೃದ್ಧಿಗೆ ವಿನೂತನ ಯೋಜನೆಗಳನ್ನು ಜಾರಿಗೆ ತರಲು ನಿರಂತರ ಪ್ರಯತ್ನ ಕೈಗೊಂಡಿದ್ದು, ಇದೀಗಿ ಎನ್‌ಆರ್‌ಐ ಗಳಿಗೆ ಓಟಿಂಗ್ ಹಕ್ಕು ಸಿಕ್ಕಿರುವುದು, ಮೋದಿ ಸರ್ಕಾರಕ್ಕೆ ಮತ್ತೊಂದು ಗರಿಮೂಡಿಸಿದೆ.

ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು, ಭಾರತದಲ್ಲಿ ನಡೆಯುವ ಚುನಾವಣೆಗಳಲ್ಲಿ ಸುಲಭವಾಗಿ ಭಾಗವಹಿಸಲು ಅನುವು ಮಾಡಿಕೊಡಲು ಇ-ಓಟಿಂಗ್ ಅವಕಾಶ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಕೇಂದ್ರ ಚುನಾವಣಾ ಆಯೋಗದ ವೈಬ್‌ಸೈಟ್‌ನಲ್ಲಿರುವ ಇ-ಬ್ಯಾಲೆಟ್‌ನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ತಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸುವ ಮೂಲಕ ಎನ್‌ಆರ್‌ಐಗಳು ತಮ್ಮ ಹಕ್ಕು ಚಲಾಯಿಸಬಹುದು. ಸುಮಾರು 11 ಕೋಟಿ ಭಾರತೀಯರು ವಿದೇಶಗಳಲ್ಲಿದ್ದು, ಅವರೆಲ್ಲರು ಇ-ಓಟಿಂಗ್ ಹಕ್ಕನ್ನು ಪಡೆಯುತ್ತಾರೆ.

ಎನ್‌ಐಆರ್‌ಗಳ ಮತದಾನದ ಮೂಲಕ ರಾಜಕೀಯ ಸ್ಥಿತಿಗತಿಗಳಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com