ಮಗಳ ಸಜೀವ ಸಮಾಧಿಗೆ ಯತ್ನಿಸಿದ ತಂದೆ!

ವ್ಯಕ್ತಿಯೋರ್ವ ತನ್ನ ಮಗಳನ್ನೇ ಸಜೀವವಾಗಿ ಸಮಾಧಿ ಮಾಡಲು ಯತ್ನಿಸಿದ ಘಟನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಅಗರ್ತಲಾ: ವ್ಯಕ್ತಿಯೋರ್ವ ತನ್ನ ಮಗಳನ್ನೇ ಸಜೀವವಾಗಿ ಸಮಾಧಿ ಮಾಡಲು ಯತ್ನಿಸಿದ ಘಟನೆ ತ್ರಿಪುರದ ಪುಟ್ಯಾ ಪ್ರದೇಶದಲ್ಲಿ ನಡೆದಿದೆ.

ತಂದೆ ಅಬ್ದುಲ್ ಹುಸೇನ್ ತನ್ನ ಮಗಳಾದ 9 ವರ್ಷದ ಬಾಲಕಿಯು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೋಪಗೊಂಡು ಮನೆಯಲ್ಲಿ ಯಾರು ಇಲ್ಲಿದಿದ್ದ ಸಂದರ್ಭವನ್ನು ಕಂಡು ಮನೆಯ ಹಿಂಬದಿಯಲ್ಲಿ ಬಾಲಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಸಜೀವವಾಗಿ ಸಮಾಧಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡುವುದನ್ನು ಕಂಡ ಪಕ್ಕದ ಮನೆಯ ಮಹಿಳೆಯೊಬ್ಬಳು ಕೂಗಿಕೊಂಡಿದ್ದಾಳೆ.

ನಂತರ ಸ್ಥಳಕ್ಕಾಗಿಸಿದ ಸಾರ್ವಜನಿಕರು ಅಬ್ದುಲ್ ಹುಸೇನ್ ನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com