ಅಪಘಾತದಿಂದ ಮಲೇಷಿಯಾ ವಿಮಾನ ಪತನ: ಮಲೇಷಿಯಾ ಘೋಷಣೆ

ಎಂಎಚ್370
ಎಂಎಚ್370

ಕೌಲಲಂಪುರ್: ಕಳೆದ ಮಾರ್ಚ್ 8ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷಿಯಾ ಎಂಎಚ್370 ವಿಮಾನ ಅಪಘಾತದಿಂದ ಪತನಗೊಂಡಿದೆ ಎಂದು ಮಲೇಷಿಯಾ ನಾಗರಿಕ ವಿಮಾನಯಾನ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ನಿಗೂಢವಾಗಿ ಕಣ್ಮರೆಯಾಗಿದ್ದ ಎಂಎಚ್370 ವಿಮಾನ ಅಪಘಾತದಿಂದಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ 239 ಪ್ರಯಾಣಿಕರು ದುರಂತದಲ್ಲಿ ಅಸುನೀಗಿದ್ದಾರೆ. ಈ ಅತ್ಯಂತ ದುಃಖದ ವಿಚಾರವನ್ನು ಬಹಿರಂಗಪಡಿಸಲೇಬೇಕಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥ ಅಜರುದ್ದೀನ್ ಅಬ್ದುಲಾ ರೆಹಮಾನ್ ಹೇಳಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಧನ ನೀಡಲಾಗುವುದು ಎಂದರು.

ಮಲೇಷ್ಯಾದಿಂದ ಚೀನಾಗೆ ಹೊರಟಿದ್ದ ಎಂಎಚ್370 ವಿಮಾನ ಕಳೆದ ಮಾರ್ಚ್ 8ರಂದು ನಿಗೂಢವಾಗಿ ನಾಪತ್ತೆಯಾಗಿತ್ತು. ಪತನಗೊಂಡಿರುವ ವಿಮಾನದ ಶೋಧಕ್ಕೆ ಬಿರುಸಿನ ಕಾರ್ಯಾಚರಣೆ ನಡೆದಿತ್ತು. 5 ಭಾರತೀಯರು ಸೇರಿ ವಿಮಾನದಲ್ಲಿ 14 ರಾಷ್ಟ್ರಗಳ 227 ಪ್ರಯಾಣಿಕರು, 12 ಸಿಬ್ಬಂದಿ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com