ಕಿರಣ್ ಬೇಡಿಗಿಂತ ಶಾಜಿಯ ಇಲ್ಮಿ ಸುಂದರವಾಗಿದ್ದಾಳೆ: ಕಾಟ್ಜು ವಿವಾದಾತ್ಮಕ ಟ್ವೀಟ್

ಮಾರ್ಕಾಂಡೇಯ ಕಾಟ್ಜು
ಮಾರ್ಕಾಂಡೇಯ ಕಾಟ್ಜು

ನವದೆಹಲಿ: ದೆಹಲಿಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿಗಿಂತ ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಬಿಜೆಪಿ ಅಭ್ಯರ್ಥಿ ಶಾಜಿಯ ಇಲ್ಮಿ ಸುಂದರವಾಗಿದ್ದಾಳೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಿರಣ್ ಬೇಡಿಗಿಂತ ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಬಿಜೆಪಿ ಸದಸ್ಯೆ ಶಾಜಿಯ ಇಲ್ಮಿ ಸುಂದರವಾಗಿದ್ದಾಳೆ. ಬಿಜೆಪಿ ಆಯ್ಕೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಖಂಡಿತವಾಗಿಯು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಟ್ವೀಟ್ ಮಾಡುವುದರ ಮೂಲಕ ಮತ್ತೋಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಮತದಾರರು ಸುಂದರವಾಗಿರುವವರಿಗೆ ಮತ ನೀಡುತ್ತಾರೆ ಹೀಗಾಗಿ ಶಾಜಿಯಾ ಇಲ್ಮಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ದೆಹಲಿ ಭರ್ಜರಿ ಜಯ ಗಳಿಸಲಿದೆ ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಕಾಟ್ಜು ಅವರು, ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾರತದ ರಾಷ್ಟ್ರಪತಿಯಾಗಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸುಂದರ ಮಹಿಳೆಯರು ಚುನಾವಣೆಯಲ್ಲಿ ನಿಂತು ಆಯ್ಕೆಯಾಗುವುದನ್ನು ಯಾವಾಗಲೂ ಬೆಂಬಲಿಸುತ್ತೇನೆ ಎಂದಿದ್ದರು.

ದೆಹಲಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿಯಂತೆ ಆಮ್ ಆದ್ಮಿ ಪಕ್ಷ ತೊರೆದಿದ್ದ ಶಾಜಿಯ ಇಲ್ಮಿ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com