

ನವದೆಹಲಿ: ಕಪ್ಪು ಹಣ ಇರುವುದನ್ನು ಘೋಷಿಸಲು ನೀಡಲಾಗಿದ್ದ ಕಾಲಮಿತಿಯನ್ನು ಹಣಕಾಸು ಸಚಿವಾಲಯ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಕೇಂದ್ರ ಸರ್ಕಾರದ ಹೊಸ ಕಪ್ಪು ಹಣ ನೀತಿ ಮುಂದಿನ ವರ್ಷ ಏಪ್ರಿಲ್ ನಿಂದ ಜಾರಿಗೆ ಬರಲಿದ್ದು, ಶೇಕಡಾ 30ರಷ್ಟು ತೆರಿಗೆ ಮಾತ್ರವಲ್ಲದೆ ಶೇಕಡಾ 90ರಷ್ಟು ದಂಡ ವಿಧಿಸಲಾಗುತ್ತದೆ ಮತ್ತು ಹಣ ಹೊಂದಿರುವವರಿಗೆ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ.
2015ನೇ ಸಾಲಿನ ಕಪ್ಪು ಹಣ ಕಾಯ್ದೆಯನ್ನು ಸಂಸತ್ತಿನಲ್ಲಿ ಕಳೆದ ಮೇ ತಿಂಗಳಲ್ಲಿ ಜಾರಿಗೆ ತರಲಾಗಿತ್ತು.