ಕೇಂದ್ರ ಸರ್ಕಾರ

5 ಬಾರಿ ತಿರಸ್ಕೃತವಾದರೂ ಪಟ್ಟು ಬಿಡದ ಸರ್ಕಾರ: ಕಾಡುಗೊಲ್ಲರನ್ನು ST ಪಟ್ಟಿಗೆ ಸೇರಿಸಲು ಮತ್ತೆ ಶಿಫಾರಸು!
ಕಾಡುಗೊಲ್ಲ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಬುಡಕಟ್ಟು ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಹೊಸ ವರದಿ ಸಿದ್ಧಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಆಪರೇಷನ್ ಸಿಂಧೂರ ಬಳಿಕ ಪಾಕ್ ಸಚಿವ ಭಾರತಕ್ಕೆ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾ ಭೇಟಿಗೆ ಕೇಂದ್ರದಿಂದ ಅನುಮತಿ ನಿರಾಕರಣೆ!
ಭಾರತ ಭೇಟಿಯ ಸಂದರ್ಭದಲ್ಲಿ ಮಲಿಕ್ ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ.

3 ಮನವಿ ಪತ್ರ ಸಲ್ಲಿಸಿದರೂ ಕೇಂದ್ರದಿಂದ ಪ್ರತಿಕ್ರಿಯೆಯಿಲ್ಲ; ರೈತರ ಸಂಕಷ್ಟದಲ್ಲಿ ರಾಜಕೀಯ ಬೇಡ: ಜಿ. ಪರಮೇಶ್ವರ್
ರಾಜ್ಯ ಸರ್ಕಾರವು ಪ್ರತಿಭಟನೆ ನಡೆಸಿ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಪರಿಹಾರ ನೀಡಲಾಗಿತ್ತು. ಆಗಲೂ ಕೇವಲ 3,500 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು.

ಅತಿಯಾದ ಎಥೆನಾಲ್ ಮಿಶ್ರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ದೂರು; ಕ್ರಮ ಕೈಗೊಳ್ಳದಿದ್ರೆ ಹೊಸ ಕಾನೂನು ಜಾರಿ: ರಿಜ್ವಾನ್
ಆಹಾರ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಅಂಗಡಿಗಳನ್ನು ಪರಿಶೀಲಿಸಿದಾಗ, 25 ಕಡೆಗಳಲ್ಲಿ ಬಳಸುತ್ತಿದ್ದ ತೂಕದ ಯಂತ್ರಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಮುದ್ರೆ (ಸ್ಟಾಂಪಿಂಗ್) ಹಾಕಿಸದಿರುವುದು ಕಂಡುಬಂದಿದೆ.

ಮೋದಿ ಸರ್ಕಾರ ಸುಗಮವಾಗಿ ನಡೆಯಲು ನಮ್ಮದೇ ನೆರವು; ಆದರೆ ಕೇಂದ್ರದಿಂದ ನಮಗೇ ವಂಚನೆ: ಪ್ರಿಯಾಂಕ್ ಖರ್ಗೆ
ಮೆಟ್ರೋ ಯೋಜನೆಗೆ ಭೂಸ್ವಾಧೀನ ಮತ್ತು ಕಾನೂನು ವೆಚ್ಚಗಳು ಸೇರಿದಂತೆ ಒಟ್ಟು ಹಣಕಾಸಿನ ಸುಮಾರು ಶೇಕಡಾ 84 ರಷ್ಟು ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ, ಆದರೆ ಕೇಂದ್ರದ ಪಾಲು ಕೇವಲ ಶೇಕಡಾ 16 ರಷ್ಟಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ; 15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!
ಈ ವಿಶೇಷ ಅಧಿವೇಶನವು ಯಾವಾಗ ನಡೆಯಲಿದೆ ಅಥವಾ ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ; ವರ್ಗಗಳು 13ರಿಂದ 9ಕ್ಕೆ ಇಳಿಕೆ!
ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಡೆಗೆ ಕೇಂದ್ರ ಸರ್ಕಾರವು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಭಾರತೀಯ ವೀಸಾ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸಿದ್ದು ಸರಳಗೊಳಿಸಿದೆ.

ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ 'ಅಧಿಕ' ಎಥೆನಾಲ್ ಮಿಶ್ರಣ: ನಮ್ಮ ವರದಿಗೆ ನಾವು ಬದ್ಧ- ರಿಜ್ವಾನ್ ಅರ್ಷದ್!
ರಾಜ್ಯಾದ್ಯಂತ ಪೆಟ್ರೋಲ್ ಪಂಪ್‌ಗಳಿಂದ ಸಂಗ್ರಹಿಸಲಾದ 63 ಮಾದರಿಗಳಲ್ಲಿ ನಿಜವಾದ ಎಥೆನಾಲ್ ಅಂಶ ಎಷ್ಟಿದೆ ಎಂಬುದನ್ನು ವಿವರಿಸಲು OMCಗಳಿಗೆ ರಿಜ್ವಾನ್ ಅರ್ಷದ್ ಸವಾಲು ಹಾಕಿದರು.

ಆಧಾರ್ ಕಥೆ ಅಂತ್ಯ? ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಬದಲು ವೋಟರ್ ಐಡಿ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ!
ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಹಾಗೂ ಹಣ ಪಾವತಿ ಪಡೆಯಲು ಇನ್ಮುಂದೆ ಆಧಾರ್ ಕಾರ್ಡ್ ಬದಲಾಗಿ ಮತದಾರರ ಗುರುತಿನ ಚೀಟಿ ಮತ್ತು ಬಯೋಮೆಟ್ರಿಕ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆ ಕುರಿತ ವರದಿ ಇಲ್ಲಿದೆ:

