

ನವದೆಹಲಿ: ಒಂದೇ ಓಕೆ, ಎರಡು ಯಾಕೆ?- ಇದು ಕುಟುಂಬ ಯೋಜನೆಗೆ ಸಂಬಂಧಿಸಿದ ಧ್ಯೇಯ ವಾಕ್ಯ. ಇದೇ ಮಾದರಿ ಯೋಜನೆಯನ್ನು ವಾಹನ ಬಳಕೆ ನಿಯಂತ್ರಣಕ್ಕೆ ತಂದರೆ ಹೇಗಿರುತ್ತದೆ.
ಅದರ ಜೊತೆಗೆ ಹೆಚ್ಚಿನ ಪ್ರಮಾಣದ ತೆರಿಗೆ ಯನ್ನು ಕೇಂದ್ರದ ಬೊಕ್ಕಸಕ್ಕೆ ತುಂಬಿಸಲು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಯೋಜನೆ ಹಾಕಿಕೊಂಡಿದ್ದಾರೆ. ಕುಟುಂಬ ಯೋಜನೆ ಅನುಷ್ಠಾನದಂತೆ ದೈನಂದಿನ ಅಗತ್ಯಕ್ಕೆ ಮಾತ್ರ ವಾಹನ ಬಳಸಬೇಕು. ಹಳೆಯ ಕಾರುಗಳನ್ನು ತ್ಯಜಿಸಿ ಹೊಸ ಕಾರು ಖರೀದಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಪಾವತಿಯಾಗುತ್ತದೆ ಎಂದಿದ್ದಾರೆ.
ಅವರ ಪ್ರಕಾರ ಪ್ರತಿ ಹೊಸ ಕಾರಿನಿಂದ ಸರ್ಕಾರಕ್ಕೆ ರು.95 ಸಾವಿರ ಲಾಭವಾಗುತ್ತದೆ. ಹಳೆ ಕಾರು ಹಿಂತಿರುಗಿಸುವವರಿಗೆ ಅಲ್ಪ ಪ್ರಮಾಣದ ಪ್ರೋತ್ಸಾಹ ಧನ ನೀಡುವ ಚಿಂತನೆಯೂ ಸರ್ಕಾರಕ್ಕಿದೆ. ದೊಡ್ಡ ಪ್ರಮಾಣದ ಕೈಗಾರಿಕಾ ಕ್ಷೇತ್ರಗಳಲ್ಲಿ ಹಳೆಯ ಕಾರುಗಳನ್ನು ಪುನರ್ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ ಗಡ್ಕರಿ.