ನಮ್ಮ ಕುಟುಂಬದ ಯಾರು ಲಲಿತ್ ಮೋದಿ ಆತಿಥ್ಯ ಸ್ವೀಕರಿಸಿಲ್ಲ: ರಾಹುಲ್

ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಐಪಿಎಲ್ ಕಳ್ಳಾಟದ ರೂವಾರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯ ಆತಿಥ್ಯ ಸ್ವೀಕರಿಸಿಲ್ಲ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಐಪಿಎಲ್ ಕಳ್ಳಾಟದ ರೂವಾರಿ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಯ ಆತಿಥ್ಯ ಸ್ವೀಕರಿಸಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಲಲಿತ್ ಮೋದಿಯ ಈ ಹೇಳಿಕೆ ಆಧಾರರಹಿತವಾಗಿದೆ. ನಾನಾಗಲಿ, ನನ್ನ ಭಾವ ರಾಬರ್ಟ್‌ ವಾದ್ರಾ ಅಥವಾ ಸೋದರಿ ಪ್ರಿಯಾಂಕ ಗಾಂಧಿಯಾಗಲಿ ಯಾರೂ ಅವರ ಬಳಿ ಆತಿಥ್ಯ ಪಡೆದಿಲ್ಲ ಎಂದು ರಾಹುಲ್ ಗಾಂಧಿ ಲಲಿತ್ ಮೋದಿಗೆ ತಿರುಗೇಟು ನೀಡಿದ್ದಾರೆ.

ಮೋದಿಯ ಈ ಆರೋಪ ಹಸೀ ಸುಳ್ಳು ಎಂದು ರಾಹುಲ್ ಹೇಳಿದ್ದಾರೆ. ಹೋಟೆಲ್ ಒಂದರಲ್ಲಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಹಾಗೂ ಪತಿ ರಾಬರ್ಟ್ ವಾದ್ರಾನ  ಅತಿಥಿಗಳಾಗಿದ್ದರು ಎಂದು ಬ್ರಿಟನ್ ವೀಸಾ ವಿವಾದದ ಆರೋಪಿ ಲಲಿತ್ ಮೋದಿ ತನ್ನ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದು, ಆದರೆ ಅದನ್ನು ಕಾಂಗ್ರೆಸ್ ಸಾರಾಸಗಟಾಗಿ ತಳ್ಳಿಹಾಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com