

ಝಾಂಗರ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯು(ಐಎಸ್) ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ದಲ್ಲಿ ನೆಲೆಯೂರಲು ಯತ್ನಿಸುತ್ತಿದೆ ಎಂದು ಹಿರಿಯ ಸೇನಾ ಅಧಿಕಾರಿ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಸೇನೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಐಎಸ್ ಲ್ಲಿಯವರೆಗೆ ಈ ಬಗ್ಗೆ ಕಾರ್ಯಪ್ರವೃತ್ತರಾಗಿಲ್ಲ. ಆದರೆ ಅವರು ಕಾಶ್ಮೀರದಲ್ಲಿ ನೆಲೆ ಪಡೆಯಲು ಸಂಪೂರ್ಣವಾಗಿ ಯತ್ನಿಸುತ್ತಿದೆ ಎಂದು ಜನರಲ್ ಆಫೀಸರ್ ಕಮಾಡಿಂಗ್(ಜಿಒಸಿ) ಲೆ.ಜನರಲ್ ಕೆ. ಎಚ್. ಸಿಂಗ್ ತಿಳಿಸಿದ್ದಾರೆ.
ಝಾಂಗರ್‍ನಲ್ಲಿ ಸೇನಾ ಕಾರ್ಯಾಚರಣೆಯ ಬಗ್ಗೆ ಶುಕ್ರವಾರ ಮಾಹಿತಿ ನೀಡುವ ಸಂದರ್ಭದಲ್ಲಿ ಲೆ.ಜನರಲ್ ಕೆ.ಎಚ್ ಸಿಂಗ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.