

ಆಡೆನ್: ಯುದ್ಧ ಗ್ರಸ್ಥ ಯೆಮೆನ್ ನಲ್ಲಿ ಮತ್ತೆ ಉಗ್ರರ ಉಪಟಳ ಪ್ರಾರಂಭವಾಗಿದ್ದು, ಇಂದು ನಡೆದ ಉಗ್ರರ ದಾಳಿಗೆ ಸುಮಾರು 30 ಕ್ಕೂ ಹೆಚ್ಚು ಯೆಮೆನ್ ಸೈನಿಕರು ಬಲಿಯಾಗಿರುವ ಘಟನೆ ಸೌದಿ ಅರೇಬಿಯಾದ ಮೆಕನೈಸ್ಡ್ ಬ್ರಿಗೇಡ್ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಸೌದಿ ಅರೇಬಿಯಾದ ಗಡಿ ಪ್ರದೇಶದಲ್ಲಿದ್ದ ಯೆಮೆನ್ ಸೈನಿಕರ ನೆಲೆ ಮೇಲೆ ಇದ್ದಕ್ಕಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸ್ಥಳದಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದು, ಸೈನಿಕರ ವಾಹನ ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳು ನಾಶವಾಗಿದೆ ಎಂದು ಹೇಳಲಾಗುತ್ತಿದೆ.
ಉಗ್ರರ ದಾಳಿಯಿಂದ ಈಗಾಗಲೇ ಹಲವು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.