

ಅಮೇಥಿ: ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಪುತ್ರ ರಿಹಾನ್ ತನ್ನ ಸೋದರ ಮಾವ ರಾಹುಲ್ ಗಾಂಧಿ ಆಯ್ಕೆಯಾಗಿರುವ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಅಮೇಥಿಯ ಗೌರಿಗಂಜ್ ಜಿಲ್ಲೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಐಷಾರಾಮಿ ಕಾರಿನಲ್ಲಿ ಬಂದ ರಿಹಾನ್ ಇಡೀ ರಾತ್ರಿ ಅಲ್ಲಿಯೇ ತಂಗಿದ್ದಾನೆ. ಸ್ನೇಹಿತರೊಂದಿಗೆ ಸ್ಥಳೀಯವಾಗಿ ಸಿಗುವ ಊಟ ಸೇವಿಸಿ ನಂತರ ದಲಿತ ಮನೆಯೊಂದಕ್ಕೆ ಭೇಟಿ ನೀಡಿದ್ದಾರೆ.
ನಂತರ ದಲಿತರ ಮನೆಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿ, ಬೆಳಗ್ಗೆ ತಿಂಡಿಗೆ ಆಲೂ ಪರೋಟ ಸೇವಿಸಿದ್ದಾರೆ. ಜೊತೆಗೆ ಗ್ರಾಮದ ಜನರ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ರಿಹಾನ್ ಭೇಟಿ ಕಾಂಗ್ರೆಸ್ ನಾಯಕರನ್ನು ಹುಬ್ಬೇರಿಸುವಂತೆ ಮಾಡಿದೆ.