

ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿಯೇ ಆಮೂಲಾಗ್ರ ಬದಲಾವಣೆ ಮಾಡುವ ಸರಕು ಮತ್ತು ಸೇವಾ ತೆರಿಗೆ ವಿಧೇಯಕ (ಜಿಎಸ್‍ಟಿ)ಕ್ಕೆ ಸಂಸತ್‍ನ ಸ್ಥಾಯಿ ಸಮಿತಿ ಸೂಚಿಸಿರುವ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಹೀಗಾಗಿ, ಅಧಿವೇಶನದಲ್ಲಿ ವಿಧೇಯಕ ಸುಸೂತ್ರವಾಗಿ ಅಂಗೀಕಾರವಾಗುವ ಸಾಧ್ಯತೆ ಇದೆ. ಜಿಎಸ್‍ಟಿ ಜಾರಿಯಿಂದ ರಾಜ್ಯ ಸರ್ಕಾರ ಗಳಿಗೆ ಉಂಟಾಗುವ ನಷ್ಟವನ್ನು 5 ವರ್ಷ ಕಾಲ ಭರ್ತಿ ಮಾಡಬೇಕು ಎಂಬ ಪ್ರತಿ ಪಕ್ಷಗಳ ಸಲಹೆ ಸೇರಿ ಪ್ರಮುಖ ಸಲಹೆ ಗಳನ್ನು ಸಮಿತಿ ಸೂಚಿಸಿತ್ತು.
ಅವೆಲ್ಲವುಗಳನ್ನೂ ಕೇಂದ್ರ ಒಪ್ಪಿಕೊಂಡಿದೆ. 24ರ ಒಳಗಾಗಿ ರಾಜ್ಯಸಭೆಯ ಆಯ್ಕೆ ಸಮಿತಿ ಸಭೆ ಸೇರಿ ವರದಿ ನೀಡಬೇಕಾಗಿದೆ. ಕಾಂಗ್ರೆಸ್ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ಷೇಪಣಾ ಟಿಪ್ಪಣಿ ಸಲ್ಲಿಸಲು ಮುಂದಾಗಿದೆ. ಲೋಕಸಭೆಯಲ್ಲಿ ಜಿಎಸ್‍ಟಿ ವಿಧೇಯಕಕ್ಕೆ ಈಗಾಗಲೇ ಅಂಗೀಕಾರ ಸಿಕ್ಕಿದೆ.