ಮುಜುಗರ ತಪ್ಪಿಸಲು ಅಧಿವೇಶನ ದಿನ ಮೊಟಕು?

ಬಿಜೆಪಿ ನೇತತ್ವದ ಎನ್‍ಡಿಎ ಸರ್ಕಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದೆಯೇ? ಆಡಳಿತಾ ರೂಢ ಬಿಜೆಪಿ ಮೇಲಿರುವ ಹಗರಣಗಳ ಆರೋಪ ಮತ್ತು ಅಧಿವೇಶನವನ್ನು 24 ದಿನಗಳಿಗೆ ತಗ್ಗಿಸಿರುವ ನಿರ್ಧಾರದಿಂದಾಗಿ ಅನುಮಾನ ಹುಟ್ಟಿದೆ...
ಸಂಸತ್ತು
ಸಂಸತ್ತು
Updated on: 

ನವದೆಹಲಿ: ಬಿಜೆಪಿ ನೇತತ್ವದ ಎನ್‍ಡಿಎ ಸರ್ಕಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದೆಯೇ? ಆಡಳಿತಾ ರೂಢ ಬಿಜೆಪಿ ಮೇಲಿರುವ ಹಗರಣಗಳ ಆರೋಪ ಮತ್ತು ಅಧಿವೇಶನವನ್ನು 24 ದಿನಗಳಿಗೆ ತಗ್ಗಿಸಿರುವ ನಿರ್ಧಾರದಿಂದಾಗಿ ಅನುಮಾನ ಹುಟ್ಟಿದೆ.

ಏಳು ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಮುಂಗಾರು ಅಧಿವೇಶನದ ಅವಧಿ 24 ದಿನಗಳಿಗೆ ತಗ್ಗಿದೆ. ಯುಪಿಎ ಸರ್ಕಾರದ ಎರಡನೇ ಅವಧಿಯ ಮೊದಲನೇ ಎರಡು ವರ್ಷ (2009-2010) ಮುಂಗಾರು ಅಧಿವೇಶನ 37 ದಿನ ನಡೆದಿತ್ತು. 2011ರಲ್ಲಿ ಇದು 39 ದಿನಕ್ಕೇರಿತ್ತು. 2012ರಲ್ಲಿ 31 ದಿನ ನಡೆದಿತ್ತು. ಹಗರಣಗಳಿಂದ ಕುಗ್ಗಿಹೋಗಿದ್ದಾಗಲೂ 2013ರಲ್ಲಿ ಕೂಡ 26 ದಿನ ಮುಂಗಾರು ಅಧಿವೇಶನ ನಡೆದಿತ್ತು. ಈಗ ಎನ್‍ಡಿಎ ಸರ್ಕಾರ ಮುಂಗಾರು ಅಧಿವೇಶನದ ಅವಧಿಯನ್ನು 24 ದಿನಗಳಿಗೆ ತಗ್ಗಿಸಿದೆ.

ಕಾರಣವೇನಿರಬಹುದು?: ಸಂಸತ್ತಿನಲ್ಲಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಿಕೊಳ್ಳಲು ಬಿಜೆಪಿ ಈ ತಂತ್ರ ಹೂಡಿರಬಹುದು. ಲಲಿತ್‍ಮೋದಿ ಎರಚಿರುವ ಕೆಸರನ್ನು ಸಂಸತ್ತಿನಲ್ಲಿ ತೊಳೆಯುವ ಮುಜುಗರ ಆಡಳಿತ ಪಕ್ಷಕ್ಕೆ ಬೇಕಿಲ್ಲ. ಸಂಸತ್ತಿನಲ್ಲಿ ಈಗಾಗಲೇ ಅದು ಸಾಕಷ್ಟು ಮುಜುಗರ ಅನುಭವಿಸಿದೆ. ಅದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ತಿದ್ದುಪಡಿ ಮಾಡಿ ನಿರ್ಣಯ ಕೈಗೊಂಡಿದ್ದಿರಬಹುದು, ಜತೆಗೆ ರಾಜ್ಯಸಭೆಯಲ್ಲಿ ಹಲವು ಮಸೂದೆಗಳ ಅಂಗೀಕಾರಕ್ಕೆ ಅಡ್ಡಿ ಮಾಡಿದ್ದಿರಬಹುದು.

ಜತೆಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಖಾಸಗಿ ಮಸೂದೆಯನ್ನು ಅಂಗೀಕರಿಸಿದ್ದು ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು. 46 ವರ್ಷಗಳಲ್ಲಿ ಅಂಗೀಕರಿಸಿದ ಇದೇ ಮೊದಲ ಖಾಸಗಿ ಮಸೂದೆ. ಸಾಮಾನ್ಯವಾಗಿ ಖಾಸಗಿ ಮಸೂದೆಗಳನ್ನು ಮಂಡಿಸಿದಾಗ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ನಂತರ ಸರ್ಕಾರದ ಭರವಸೆ ಮೇರೆಗೆ ಆ ಮಸೂದೆಯನ್ನು ಮಂಡಿಸಿದ ಸದಸ್ಯರು ವಾಪಸ್ ಪಡೆಯುತ್ತಾರೆ. ಆದರೆ, ಏ.25ರಂದು ಡಿಎಂಕೆ ಸದಸ್ಯ ತಿರುಚ್ಚಿ ಶಿವ ರಾಜ್ಯಸಭೆಯಲ್ಲಿ ಮಂಡಿಸಿದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕು ಮಸೂದೆಗೆ ಅಂಗೀಕಾರ ದೊರೆತಿತ್ತು.

ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿರುವುದು ತಂತ್ರವೂ ಅಧಿವೇಶನ ಅವಧಿ ಸ್ಪಷ್ಟ ಉದಾಹರಣೆ ಎಂದರೆ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಎಂದೂ ವಿಧಾನಸಭೆಯಲ್ಪಲಿ ಚರ್ಚೆ ಅವಕಾಶ ನೀಡುತ್ತಿರಲಿಲ್ಲವಂತೆ. ಮೋದಿ ಅಧಿಕಾರಾವಧಿಯಲ್ಲಿ ಗುಜರಾತ್ ವಿಧಾನಸಭೆ ಸರಾಸರಿ 30 ದಿನ ಕಲಾಪ ನಡೆಸಿದೆ. ಅದೇ ಕೇಶುಭಾಯ್ ಪಟೇಲ್ ಸಿಎಂ ಆಗಿದ್ದಾಗ ಸರಾಸರಿ 49 ದಿನ ಕಲಾಪ ನಡೆದಿದೆ. ಹಿಂದಿನ ಎಲ್ಲ ಸಿಎಂಗಳಿಗಿಂತಲೂ ಮೋದಿ ಅವಧಿಯಲ್ಲಿ ಅತ್ಯಂತ ಕಡಿಮೆ ಅವಧಿ ಕಲಾಪ ನಡೆದಿದೆ. 2012ರ ಜು.19ರಂದು ಒಂದೇ ಒಂದು ದಿನ ಕಲಾಪ ನಡೆಸಿದ ದಾಖೆಲೆಯೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com