ಲಲಿತ್ ಮೋದಿಗೆ ವೀಸಾ ನೆರವು ನೀಡಿಲ್ಲ: ಸುಷ್ಮಾ ಸ್ವರಾಜ್ ಪುನರುಚ್ಛಾರ

ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ವೀಸಾ ನೀಡಲು ಪ್ರಯಾಣ ದಾಖಲೆಗಳನ್ನು ಒದಗಿಸಲು ತಾವು...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Updated on: 

ನವದೆಹಲಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ವೀಸಾ ನೀಡಲು ಪ್ರಯಾಣ ದಾಖಲೆಗಳನ್ನು ಒದಗಿಸಲು ತಾವು ನೆರವು ನೀಡಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪುನರುಚ್ಚರಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಇಂದು ಉತ್ತರಿಸಿರುವ ಅವರು, ಲಲಿತ್ ಮೋದಿ ಅವರಿಗೆ ದಾಖಲೆಗಳನ್ನು ಒದಗಿಸಲು  ನೆರವು ನೀಡುವುದಾಗಲಿ, ಶಿಫಾರಸ್ಸೂ ಮಾಡುವುದಾಗಲಿ ಮಾಡಿಲ್ಲ ಎಂದು ಹೇಳಿದ್ದಾರೆ.
''ಲಲಿತ್ ಮೋದಿ ಅವರಿಗೆ ವೀಸಾ ಕೊಡುವುದು, ಬಿಡುವುದು ಇಂಗ್ಲೆಂಡ್ ಸರ್ಕಾರಕ್ಕೆ ಬಿಟ್ಟ ವಿಷಯ. ಆ ಸರ್ಕಾರ ಅಲ್ಲಿನ ಕಾನೂನಿನಂತೆ ಕ್ರಮ ಕೈಗೊಳ್ಳುತ್ತದೆ ಎಂದರು.
''ನಾನು ಸಚಿವೆಯಾಗಿ ಸಂಸತ್ತಿಗೆ ಜವಾಬ್ದಾರಳಾಗಿದ್ದೇನೆ. ದೇಶದ ಜನತೆಗೆ ತಿಳಿಸಲು ಸಂಸತ್ತು ಮಾತ್ರ ಉತ್ತಮ ವೇದಿಕೆಯಾಗಿದೆ'' ಎಂದು ಹೇಳಿದ್ದಾರೆ.
ಮೊನ್ನೆ 21ರಂದು ಸಂಸತ್ ಮುಂಗಾರು ಕಲಾಪ ಆರಂಭಗೊಂಡ ದಿನದಿಂದ ವಿರೋಧ ಪಕ್ಷದ ಸದಸ್ಯರು ಲಲಿತ್ ಮೋದಿ ವಿಷಯದಲ್ಲಿ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಪಟ್ಟು ಹಿಡಿಯುತ್ತಿದ್ದು, ಇದುವರೆಗಿನ ಕಲಾಪವನ್ನು ನುಂಗಿ ಹಾಕಿದೆ.
ಕಲಾಪ ಆರಂಭಗೊಂಡ ದಿನವೇ ಈ ವಿಷಯ ಕುರಿತು ಚರ್ಚಿಸಲು ಒಪ್ಪಿಕೊಂಡಿದ್ದೆ. ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರು ಚರ್ಚೆಗೆ ಸಿದ್ಧರಿಲ್ಲ ಎಂದು ಅವರು ಆಪಾದಿಸಿದರು.
ಲಲಿತ್ ಮೋದಿ ಅವರಿಗೆ ಲಂಡನ್ ಗೆ ಪ್ರಯಾಣಿಸಲು ಅವಕಾಶ ನೀಡುವಂತೆ   ಬ್ರಿಟನ್ ರಾಜಕಾರಣಿ ಕೈತ್ ವಾಜ್ ಅವರಲ್ಲಿ ದೂರವಾಣಿ ಮೂಲಕ ಮನವಿ ಮಾಡಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ''ಅದು ಖಂಡಿತಾ ಸುಳ್ಳು'' ಎಂದು ಸುಷ್ಮಾ ಸ್ವರಾಜ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com