ಫೋಟೋ ತೆಗೆಯಲು ಹೋಗಿ ಸಿಂಹಕ್ಕೆ ಆಹಾರವಾದ ಯುವತಿ!

ಸಫಾರಿಗಳಲ್ಲಿ ರಕ್ಷಿತ ವಾಹನಗಳಲ್ಲಿ ಕುಳಿತು ಪ್ರಯಾಣಿಸುವುದೇ ಮೈಯಲ್ಲಿ ನಡುಕ ಹುಟ್ಟಿಸುತ್ತದೆ ಅಂತಹದರದಲ್ಲಿ ಯುವತಿಯೊಬ್ಬಳು ಕಾರಿನ...
ಸಿಂಹ ದಾಳಿ(ಸಾಂದರ್ಭಿಕ ಚಿತ್ರ)
ಸಿಂಹ ದಾಳಿ(ಸಾಂದರ್ಭಿಕ ಚಿತ್ರ)
Updated on: 

ಜೋಹಾನ್ಸ್ ಬರ್ಗ್: ಸಫಾರಿಗಳಲ್ಲಿ ರಕ್ಷಿತ ವಾಹನಗಳಲ್ಲಿ ಕುಳಿತು ಪ್ರಯಾಣಿಸುವುದೇ ಮೈಯಲ್ಲಿ ನಡುಕ ಹುಟ್ಟಿಸುತ್ತದೆ ಅಂತಹದರದಲ್ಲಿ ಯುವತಿಯೊಬ್ಬಳು ಕಾರಿನ ವಿಂಡೋ ತೆಗೆದು ಸಿಂಹದ ಫೋಟೋ ತೆಗೆಯಲು ಹೋಗಿ ತಾನೇ ಸಿಂಹಕ್ಕೆ ಆಹಾರವಾದ ದಾರುಣ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ಅಮೆರಿಕಾದ 22 ವರ್ಷದ ಕ್ಯಾಥರೀನ್ ಚಾಪೆಲ್ ಮೃತ ಯುವತಿ ಎಂದು ಗುರುತಿಸಲಾಗಿದೆ. ಕ್ಯಾಥರೀನ್ ಕಾರಿನ ವಿಂಡೋಗಳನ್ನ ತೆರೆದಿಟ್ಟುಕೊಂಡು ಸಿಂಹಗಳ ಫೋಟೋ ತೆಗೆಯಲು ಹೋಗಿ ಸಿಂಹಕ್ಕೆ ಆಹಾರವಾಗಿದ್ದಾಳೆ.

ಸಫಾರಿಗಳಲ್ಲಿ ಕಾರಿನ ವಿಂಡೋಗಳನ್ನು ತೆಗೆಯಕೂಡದು ಎಂಬ ಭದ್ರತಾ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ ಕ್ಯಾಥರೀನ್ ಕಾರಿನ ವಿಂಡೋಗಳನ್ನು ತೆಗೆದು ಹತ್ತಿರದಿಂದ ಸಿಂಹಗಳ ಫೋಟೋವನ್ನು ತೆಗೆಯಲು ಮುಂದಾಗಿದ್ದಾಳೆ. ಈ ವೇಳೆ ಸಿಂಹ ಯುವತಿಯ ದೇಹಕ್ಕೆ ಬಾಯಿ ಹಾಕಿದೆ. ಕಾರಿನಿಂದ ಹೊರಕ್ಕೆ ಎಳೆದುಕೊಂಡಿದೆ. ನಂತರ ಆಕೆಯ ಕುತ್ತಿಗೆಗೆ ಬಾಯಿ ಹಾಕಿದ್ದರಿಂದ ಯುವತಿಯ ಪ್ರಾಣ ಪಕ್ಷಿ ಹಾರಿಹೋಗಿದೆ.

ಈ ದೃಶ್ಯಗಳು ಯುವತಿಯ ಕ್ಯಾಮರದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದೇ ವೇಳೆ ಸಫಾರಿಗೆ ಬಂದಿದ್ದ ಇತರ ಪ್ರವಾಸಿಗರು ತೆಗೆದಿರುವ ವಿಡಿಯೋದಲ್ಲಿ ಯುವತಿಯು ಸಿಂಹಕ್ಕೆ ಆಹಾರವಾಗಿರುವುದು ಸೆರೆಯಾಗಿದೆ.

ಒಂದು ರೀತಿಯಲ್ಲಿ ಯುವತಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದೆ. ಹೀಗಾಗಿ ಭದ್ರತಾ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವುದು ಉತ್ತಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com