ಗೂಗಲ್‌ 'ಟಾಪ್ 10 ಕ್ರಿಮಿನಲ್ಸ್' ಸರ್ಚ್ ನಲ್ಲಿ ಪ್ರಧಾನಿ ಮೋದಿ ಸೇರಿ ಹಲವು ವಿಲಕ್ಷಣ ಫೋಟೋಗಳು

ಗೂಗಲ್ ಸರ್ಚ್‍ ನ ಪ್ರಮುಖ ಹತ್ತು ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ವಿಲಕ್ಷಣ ಫೋಟೋಗಳು...
ಗೂಗಲ್ ಸರ್ಚ್ ಫಲಿತಾಂಶ
ಗೂಗಲ್ ಸರ್ಚ್ ಫಲಿತಾಂಶ

ನವದೆಹಲಿ: ಗೂಗಲ್ ಸರ್ಚ್ ನ ಪ್ರಮುಖ ಹತ್ತು ಕ್ರಿಮಿನಲ್ಸ್ ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಲಕ್ಷಣ ಫೋಟೋಗಳು ಕಂಡುಬಂದಿದ್ದು, ಇದಕ್ಕೆ ಗೂಗಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗೂಗಲ್ ಸರ್ಚ್ ಮಾಡಿದಾಗ ಬರುವ ಮೊದಲ ಹತ್ತು ಫೋಟೋಗಳಲ್ಲಿ ಮೂರು ಬಾರಿ ಮೋದಿ ಫೋಟೋ ಕಾಣಿಸಿಕೊಂಡಿದೆ. ಗೂಗಲ್ ಇಮೇಜ್ ಸರ್ಚ್‍ ನಲ್ಲಿ ಮೋದಿ ಫೋಟೋ ಕಾಣಿಸಿದ್ದಕ್ಕೆ  ಗೂಗಲ್ ವಿರುದ್ಧ ಅಸಾಮಾಧಾನ ವ್ಯಕ್ತವಾಗಿದೆ. ಇದೀಗ ಟ್ವಿಟರ್ ನಲ್ಲಿ ಮೋದಿ ಪರ, ವಿರೋಧ ಗುಂಪುಗಳು ವಾದ-ವಿವಾದದಲ್ಲಿ ತೊಡಗಿದ್ದಾರೆ.

ಈ ಸುದ್ದಿ ಪ್ರಕಟಗೊಂಡ ಬಳಿಕ ಟ್ವಿಟ್ಟರ್’ನಲ್ಲಿ ಟಾಪ್ ಹತ್ತು ಕ್ರಿಮಿನಲ್ ಹ್ಯಾಶ್ ಟ್ಯಾಗ್ ಟ್ರೆಡಿಂಗ್ ಟಾಪಿಕ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com