ಸಲಿಂಗಿ ಮಗನನ್ನು ಸರಿಪಡಿಸಲು ತಾಯಿಯಿಂದಲೇ ಮಗನ ಮೇಲೆ ಅತ್ಯಾಚಾರ! (ಸಾಂದರ್ಭಿಕ ಚಿತ್ರ)
ಸಲಿಂಗಿ ಮಗನನ್ನು ಸರಿಪಡಿಸಲು ತಾಯಿಯಿಂದಲೇ ಮಗನ ಮೇಲೆ ಅತ್ಯಾಚಾರ! (ಸಾಂದರ್ಭಿಕ ಚಿತ್ರ)

ತಾಯಿಯಿಂದಲೇ ಮಗನ ಮೇಲೆ ಅತ್ಯಾಚಾರ!

ತಾಯಿಯೇ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದರೆ ನಂಬುತ್ತೀರಾ? ನಂಬಲೇಬೇಕಾದ ಸತ್ಯ ಸಂಗತಿಯಿದು.ಇಂತಹುದೊಂದು ಅಚ್ಚರಿಯ ಘಟನೆ ನಡೆದಿದ್ದು ಬೇರಾವುದೋ ದೂರದ ದೇಶದಲ್ಲಲ್ಲ. ನಮ್ಮದೇ ಬೆಂಗಳೂರಿನಲ್ಲಿ...

ನವದೆಹಲಿ: ತಾಯಿಯೇ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದರೆ ನಂಬುತ್ತೀರಾ? ನಂಬಲೇಬೇಕಾದ ಸತ್ಯ ಸಂಗತಿಯಿದು.ಇಂತಹುದೊಂದು ಅಚ್ಚರಿಯ ಘಟನೆ ನಡೆದಿದ್ದು ಬೇರಾವುದೋ ದೂರದ ದೇಶದಲ್ಲಲ್ಲ. ನಮ್ಮದೇ ಬೆಂಗಳೂರಿನಲ್ಲಿ.

ಇತ್ತೀಚೆಗಷ್ಟೇ ತಾಯಿಯೊಬ್ಬಳು ತನ್ನ ಸಲಿಂಗಿ ಮಗನಿಗೆವರ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು ನೆನಪಿರಬಹುದು. ಆದರೆ, ಇಲ್ಲಿ ತನ್ನ ಸಲಿಂಗಿ ಮಗ ಎಲ್ಲರಂತಾಗಬೇಕು ಎಂಬ ಉದ್ದೇಶದಿಂದ ತಾಯಿಯೊಬ್ಬಳು ಮಗನ ಮೇಲೆಯೇ ಅತ್ಯಾಚಾರ ಎಸಗಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಲಿಂಗಿಗಳಾದ ಮಕ್ಕಳನ್ನು ಸರಿಪಡಿಸಲೆಂದು ಭಾರತದಲ್ಲಿ ಅನೇಕ ಕುಟುಂಬಗಳು ಇಂತಹ ಕ್ರಮಗಳ ಮೊರೆಹೋಗುತ್ತಿರುವ ಆಘಾತಕಾರಿ ಅಂಶವು ಇದರಿಂದಾಗಿ ಬಹಿರಂಗವಾಗಿದೆ. ಸಲಿಂಗಿಗಳನ್ನು `ಸರಿದಾರಿಗೆ ತರುವ ಅತ್ಯಾಚಾರ'(ಕರೆಕ್ಟಿವ್ ರೇಪ್) ಎಂದೇ ಇದನ್ನು ಹೇಳಲಾಗುತ್ತದೆಯಂತೆ.

ಸಲಿಂಗಿ ಮಗನ ಮೇಲೆ ತಾಯಿಯೇ ಅತ್ಯಾಚಾರ ಎಸಗಿದಂತೆ, ಸಲಿಂಗಕಾಮಿ ಹೆಣ್ಣುಮಕ್ಕಳ ಮೇಲೆ ಸಂಬಂಧಿಕರಿಂದಲೇ ಅತ್ಯಾಚಾರ ಮಾಡಿಸಲಾಗುತ್ತಿದೆಯಂತೆ. ಈ ಮೂಲಕವಾದರೂ
ಅವರು ಸರಿಹೋಗುತ್ತಾರೆ ಎಂಬ ಯೋಚನೆ ಕುಟುಂಬ ಸದಸ್ಯರದ್ದು. ಆದರೆ, ಇಂತಹ ಕ್ರಮಗಳಿಂದಾಗಿ ಆ ಸಲಿಂಗಿಗಳು ಅನುಭವಿಸುವ ಚಿತ್ರಹಿಂಸೆ ಹೇಳತೀರದು ಎನ್ನುತ್ತದೆ ತೆಲಂಗಾಣದ ಎಲ್‍ಜಿಬಿಟಿ ಸಮುದಾಯದ ಆಪತ್ತು ಪರಿಹಾರ ತಂಡ.

15 ಪ್ರಕರಣಗಳು: ಕಳೆದ 5 ವರ್ಷಗಳಲ್ಲಿ `ಸರಿದಾರಿಗೆ ತರುವ ಅತ್ಯಾಚಾರ'ದ 5 ಪ್ರಕರಣಗಳು ವರದಿಯಾಗಿವೆ ಎಂದು ಎಲ್‍ಜಿಬಿಟಿ ತಂಡ ತಿಳಿಸಿದೆ. ಆದರೆ ಇಲ್ಲಿ ಕುಟುಂಬ ಸದಸ್ಯರಿಂದಲೇ ಅತ್ಯಾಚಾರ ಆಗುವ ಕಾರಣ ಯಾರು ಕೂಡ ಪೊಲೀಸರಿಗೆ ದೂರು ನೀಡಲು ಮುಂದೆ ಬರುವುದಿಲ್ಲ ಎನ್ನುತ್ತಾರೆ ತಂಡದ ಸದಸ್ಯರು.

ಏನಿದು ಕರೆಕ್ಟಿವ್ ರೇಪ್?

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ 2000ನೇ ಇಸವಿಯಲ್ಲಿ `ಕರೆಕ್ಟಿವ್ ರೇಪ್' ಎಂಬುದು ಚಾಲ್ತಿಗೆ ಬಂತು. ಸಲಿಂಗಿ ಮಕ್ಕಳನ್ನು ಸರಿದಾರಿಗೆ ತಂದು ಇತರರಂತೆ ಮಾಡಬೇಕೆಂಬ ಉದ್ದೇಶದಿಂದ ಕುಟುಂಬ ಸದಸ್ಯರೇ ಕಂಡುಕೊಂಡಿರುವ ಪರಿಹಾರವಿದು. ಅದರಂತೆ, ಸಲಿಂಗಿ ಗಂಡು/ಹೆಣ್ಣಿನ ಮೇಲೆ ಕುಟುಂಬದ ಸದಸ್ಯರಿಂದಲೇ ಅಥವಾ ಸಂಬಂಧಿಕರಿಂದಲೇ ಅತ್ಯಾಚಾರ ಮಾಡಿಸಲಾಗುತ್ತದೆ. ಈ ಅತ್ಯಾಚಾರದ ಬಳಿಕ ಅವರಲ್ಲಿರುವ ಸಲಿಂಗಾಸಕ್ತಿ ಕಡಿಮೆಯಾಗಿ ಅವರು ಇತರರಂತಾಗುತ್ತಾರೆ ಎನ್ನುವುದು ಅವರ ವಾದ.

ಪರಿಣಾಮವೇನಾಗುತ್ತದೆ?
``ಕುಟುಂಬ ಸದಸ್ಯರಿಂದಲೇ ಅತ್ಯಾಚಾರ ಆಗುವ ಕಾರಣ ಯಾರೂ ಪೊಲೀಸರಿಗೆ ದೂರು ನೀಡುವುದಿಲ್ಲ. ಬದಲಿಗೆ ಘಟನೆಯಿಂದ ಆಘಾತಗೊಂಡವರು ಮನೆ ಬಿಟ್ಟು ಹೋಗುತ್ತಾರೆ. ಈ ಮೂಲಕ ಕುಟುಂಬದೊಂದಿಗಿನ ಸಂಬಂಧದ ಕೊಂಡಿಯನ್ನು ಕಳಚಿಬಿಡುತ್ತಾರೆ. ಆ ಕರಾಳ ಘಟನೆ ಮನಸ್ಸಿನಿಂದ ಅಳಿಸಿ ಹೋಗಬೇಕೆಂಬುದೇ ಅವರ ಉದ್ದೇಶವಾಗಿರುತ್ತದೆ'' ಎನ್ನುತ್ತಾರೆ ಎಲ್‍ಜಿಬಿಟಿ ಬಿಕ್ಕಟ್ಟು ನಿರ್ವಹಣಾ ತಂಡದ ಸದಸ್ಯರಾದ ವೈಜಯಂತಿ ಮೋಗ್ಲಿ.

ವಿಚಾರ ಹೊರಬಂದಿದ್ದು ಹೇಗೆ?
ಹೈದರಾಬಾದ್‍ನ ಚಿತ್ರ ನಿರ್ಮಾಪಕಿ ದೀಪ್ತಿ ತಡಂಕಿ ಎಂಬವರಿಂದಲೇ ಈ ಕರೆಕ್ಟಿರ್ ರೇಪ್ ವಿಚಾರ ಬೆಳಕಿಗೆ ಬಂತು. ತಮ್ಮ `ಸತ್ಯವತಿ' ಎಂಬ ಚಿತ್ರಕ್ಕಾಗಿ ಮಾಹಿತಿ ಕಲೆಹಾಕುತ್ತಾ ಸಾಗಿದಾಗ ದೀಪ್ತಿ ಅವರಿಗೆ ಸಲಿಂಗಿಗಳ ಮೇಲೆ ನಡೆಯುವ ಅತ್ಯಾಚಾರದ ವಿಚಾರಗಳು ಗೊತ್ತಾಗಿವೆ. ತಾಯಿಯೇ ಮಗನ ಮೇಲೆ ಅತ್ಯಾಚಾರ ಎಸಗಿದ ಘಟನೆಯೂ ತಿಳಿದುಬಂದಿದೆ. ಆದರೆ, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾತ್ರ ಯಾರೂ ಮುಂದಾಗಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com