

ಸಿಂಗಾಪೂರ್: ಸಿಂಗಾಪುರ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ರೋಗಿಗೆ ಸರಿಯಾದ ರೀತಿಯಲ್ಲಿ ಔಷಧ ನೀಡದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರಿಗೆ ನ್ಯಾಯಾಲಯ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಗರುಣಮೂರ್ತಿ ಕವಿತಾ ಎಂಬ ವೈದ್ಯೆ 2012 ರ ಜುಲೈ ನಲ್ಲಿ ರೋಗಿಯೊಗಬ್ಬನಿಗೆ ಚೆಮೊಥೆರಪಿ ಇಂಜೆಕ್ಷನ್ ಅನ್ನು ನರಕ್ಕೆ ನೀಡುವ ಬದಲು ಬೆನ್ನು ಹುರಿಗೆ ಚುಚ್ಚಿದ್ದರು. ಇದರಿಂದಾಗಿ ರೋಗಿಗೆ ಭಾರಿ ಪ್ರಮಾಣದ ನರದ ತೊಂದರೆ ಉಂಟಾಗಿತ್ತು.
ಆ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕವಿತಾ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.