ಇನ್ಪೋಸಿಸ್, ಟಿಸಿಎಸ್ ವಿರುದ್ಧ ತನಿಖೆಗೆ ಅಮೆರಿಕ ಸರ್ಕಾರ ಆದೇಶ

ಹೆಚ್ 1-ಬಿ ವೀಸಾ ಕಾಯ್ದೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ಆರೋಪಿಸಿ ಇನ್ಫೋಸಿಸ್ ಮತ್ತು ಟಿಸಿಎಸ್ ವಿರುದ್ಧ ಅಮೆರಿಕ ಸರ್ಕಾರ ತನಿಖೆ ಆರಂಭಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಹೆಚ್ 1-ಬಿ ವೀಸಾ ಕಾಯ್ದೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ಆರೋಪಿಸಿ ಭಾರತದ ಎರಡು ಪ್ರಮುಖ ಹೊರಗುತ್ತಿಗೆ ಕಂಪೆನಿಗಳಾದ ಇನ್ಫೋಸಿಸ್ ಮತ್ತು ಟಿಸಿಎಸ್ ವಿರುದ್ಧ ಅಮೆರಿಕ ಸರ್ಕಾರ ತನಿಖೆ ಆರಂಭಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ ಎಡಿಸನ್ ವಿದ್ಯುತ್ ಕಂಪೆನಿಯಡಿ ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪೆನಿಗಳು ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದು, ವಿದೇಶಿ ತಾಂತ್ರಿಕ ಕೆಲಸಗಾರರ ವೀಸಾ ನಿಯಮವನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ಅಲ್ಲಿನ ಕಾರ್ಮಿಕ ಇಲಾಖೆ ತನಿಖೆ ಆರಂಭಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಿದ್ಯುತ್ ಕಂಪೆನಿಯು ಇತ್ತೀಚೆಗೆ 500ಕ್ಕೂ ಅಧಿಕ ಮಂದಿ ತಾಂತ್ರಿಕ ಕೆಲಸಗಾರರನ್ನು ಸೇವೆಯಿಂದ ವಜಾಗೊಳಿಸಿದ್ದು, ಅವರನ್ನು ಭಾರತೀಯ ಕಂಪೆನಿಗಳು ತಾತ್ಕಾಲಿಕ ವೀಸಾದಡಿ ಕರೆಸಿಕೊಂಡಿರುವ ನೌಕರರಿಗೆ ತರಬೇತಿ ನೀಡಲು ಸೂಚಿಸಲಾಗಿದೆ. ವೀಸಾ ನೀತಿ ಉಲ್ಲಂಘನೆ ಕಾರ್ಮಿಕ ಇಲಾಖೆಯ ಗಮನಕ್ಕೆ ಬಂದ ತಕ್ಷಣ ತನಿಖೆಗೆ ಆದೇಶಿಸಿದೆ.

ವಾಲ್ಟ್ ಡಿಸ್ನಿ ಮನರಂಜನಾ ಕಂಪೆನಿಯ ನೂರಾರು ಮಂದಿ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಅವರ ಜಾಗಕ್ಕೆ ಹೆಚ್ 1-ಬಿ ವೀಸಾ ಹೊಂದಿರುವ ಭಾಗತೀಯರನ್ನು ನೇಮಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ನಂತರ ಕಾರ್ಮಿಕ ಇಲಾಖೆ ತನಿಖೆಗೆ ಆದೇಶಿಸಿದೆ.

 ಕಳೆದ ವರ್ಷ ಅಕ್ಟೋಬರ್ ನಲ್ಲಿ ಸುಮಾರು 250 ಮಂದಿ ಡಿಸ್ನಿ ನೌಕರರನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಸೂಚಿಸಲಾಗಿತ್ತು, ಅವರ ಉದ್ಯೋಗವನ್ನು ಹೆಚ್ 1-ಬಿ ವೀಸಾ ಹೊಂದಿರುವ ಭಾರತ ಮೂಲದ ವಲಸಿಗ  ನೌಕರರಿಗೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

ವಜಾಗೊಂಡಿರುವ ನೌಕರರು ಇದೀಗ, ಹೆಚ್ 1-ಬಿ ವೀಸಾ ಹೊಂದಿರುವ ವಲಸಿಗ ಭಾರತೀಯರನ್ನು ತಾಂತ್ರಿಕ ಕೆಲಸಗಳಲ್ಲಿ ನೇಮಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ವಜಾಗೊಂಡಿರುವ ನೌಕರರು ಮುಂದಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com