

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್‍ಗೆ ಮದ್ರಾಸ್ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
'ಮೈ ಹೂಂ ರಜನಿಕಾಂತ್' ಹಿಂದಿ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಅಳಿಯನ ತಂದೆ ಕಸ್ತೂರಿ ರಾಜಾಗೆ ಚಲನಚಿತ್ರ ಫೈನಾನ್ಷಿಯರ್ ಮುಕುಂದ್ ಬೋತ್ರಾ 2012ರಲ್ಲಿ ರು. 40 ಲಕ್ಷವನ್ನು ಸಾಲವಾಗಿ ನೀಡಿದ್ದರು.
ಈ ಸಂದರ್ಭದಲ್ಲಿ ಕಸ್ತೂರಿ ರಾಜ, ಒಂದು ವೇಳೆ ತಾನು ಸಾಲ ವಾಪಸ್ ಕೊಡಲು ವಿಫಲನಾದರೆ ರಜನಿಕಾಂತ್ ನೀಡುತ್ತಾರೆ ಎಂದು ಲಿಖಿತ ವಾಗಿ ವಾಗ್ದಾನ ಮಾಡಿದ್ದರು. ಅದನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್‍ನ ನ್ಯಾ. ರವಿಚಂದ್ರ ಬಾಬು ತಮಿಳು ಸೂಪರ್ ಸ್ಟಾರ್ ಗೆ ನೋಟಿಸ್ ನೀಡಿ, ಪ್ರಕರಣವನ್ನು 2 ವಾರಗಳ ಕಾಲ ಮುಂದೂಡಿದೆ.