

ನವದೆಹಲಿ: ದೇಶಾದ್ಯಂತ ವಿಷಯುಕ್ತ ಮ್ಯಾಗಿ ಮಾರಾಟವನ್ನು ನಿಷೇಧಿಸಿದ್ದು ಮಾರುಕಟ್ಟೆಯಲ್ಲಿನ ಎಲ್ಲಾ ಮ್ಯಾಗಿ ಪ್ಯಾಕೆಟ್‌ಗಳನ್ನು ವಾಪಾಸು ಪಡೆಯುವಂತೆ ಸರ್ಕಾರ ನೆಸ್ಲೆ ಕಂಪನಿಗೆ ಸೂಚಿಸಿದ್ದು, ಅದರಂತೆ ಸೂಮಾರು 320 ಕೋಟಿ ಮೊತ್ತದ ಮ್ಯಾಗಿಯನ್ನು ಸಂಸ್ಧೆ ನಾಶ ಮಾಡಿದ್ದು ಆಗಿದೆ.
ಆದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಮ್ಯಾಗಿ ಮಾರಾಟ ಹೆಗ್ಗಿಲ್ಲದೆ ನಡೆದಿದೆ. ಅಂಗಡಿ ಮಾಲೀಕರು ತಾವು ದಾಸ್ತಾನು ಮಾಡಿರುವ ಮ್ಯಾಗಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. 75 ಗ್ರಾಂನ 10 ರುಪಾಯಿ ಮುಖ ಬೆಲೆಯ ಮ್ಯಾಗಿ ಈ ಕಳ್ಳಸಂತೆಯಲ್ಲಿ 102 ರುಪಾಯಿಗೆ ಸಿಗುತ್ತಿದೆ. ಈ ಎಲ್ಲರಿಗೂ ಸಿಗುವುದಿಲ್ಲ ಕೆಲ ಪರಿಚಿತ ಗ್ರಾಹಕರಿಗೆ ಮಾತ್ರ ಈ ಪ್ಯಾಕೆಟ್‌ಗಳ ಕಳ್ಳ ಮಾರಾಟ ಮಾಡುತ್ತಾರೆ. ಅದೇ ಯಾರಾದರೂ ಹೊಸಬರು ಬಂದರೆ ಮಾತ್ರ ಮ್ಯಾಗಿ ಮಾರಾಟ ನಿಷೇಧ ಬೊರ್ಡ್ ತೋರಿಸುತ್ತಾರೆ.
ಮ್ಯಾಗಿ ಮಾರಟಾಗಾರರಿಗೆ ಈಗ ಶುಕ್ರದೆಸೆ ಆರಂಭವಾಗಿದೆ. ತಾವು ಅಡಗಿಸಿಟ್ಟ ಕ್ವಿಂಟಲ್ ಗಟ್ಟಲೆ ಮ್ಯಾಗಿಯನ್ನು 10 ಪಟ್ಟು ಹೆಚ್ಚು ಬೆಲೆಗೆ ಮಾರಿಹಣ ಮಾಡುತ್ತಿದ್ದಾರೆ. ಇವರಿಗೆ ಮ್ಯಾಗಿ ನಿಷೇಧ ವರವಾಗಿದೆ. ಮಾದಕ ವಸ್ತುಗಳನ್ನು(ಹೆರಾಯಿನ್, ಗಾಂಜಾ, ಕೋಕೇನ್) ಮಾರಾಟ ಮಾಡಿದಷ್ಟೇ ಕಳ್ಳದಂಧೆಯಲ್ಲಿ ಮಾರಾಟ ಮಾಡಲಾಗುತ್ತಿದೆ.