ಸ್ವಲ್ಪದರಲ್ಲೇ ತಪ್ಪಿತು ಸ್ವಯಂಚಾಲಿತ ಕಾರುಗಳ ಡಿಕ್ಕಿ

ಮಾನವ ಚಾಲಿತ ವಾಹನಗಳೇ ತಪ್ಪೆಸಗುತ್ತವೆ. ಅಂಥಾದ್ರಲ್ಲಿ ಯಂತ್ರ ಚಾಲಿತ ವಾಹನಗಳು ತಪ್ಪು ಮಾಡೋದ್ರಲ್ಲಿ ಅಚ್ಚರಿ ಏನಿದೆ ಅಂತೀರಾ? ಅದೂ ಕೂಡ...
ಸ್ವಯಂಚಾಲಿತ ಕಾರು
ಸ್ವಯಂಚಾಲಿತ ಕಾರು
Updated on

ಕ್ಯಾಲಿಫೋರ್ನಿಯ: ಮಾನವ ಚಾಲಿತ ವಾಹನಗಳೇ ತಪ್ಪೆಸಗುತ್ತವೆ. ಅಂಥಾದ್ರಲ್ಲಿ ಯಂತ್ರ ಚಾಲಿತ ವಾಹನಗಳು ತಪ್ಪು ಮಾಡೋದ್ರಲ್ಲಿ ಅಚ್ಚರಿ ಏನಿದೆ ಅಂತೀರಾ? ಅದೂ ಕೂಡ ಮಾನವಸೃಷ್ಟಿಯೇ ಆದ್ದರಿಂದ ತಪ್ಪು ಸಹಜವೇ.

ಈ ಪೀಠಿಕೆ ಯಾಕಂದ್ರೆ, ಕ್ಯಾಲಿಫೋರ್ನಿಯಾದಲ್ಲಿ ಎರಡು ಸ್ವಯಂಚಾಲಿತ ಕಾರುಗಳು ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ಮಿಸ್ ಆಗಿ, ಅಪಘಾತದಿಂದ ಪಾರಾಗಿವೆ. ಇವು ಮಾಮೂಲು ಕಾರುಗಳೇನೂ ಅಲ್ಲ. ಒಂದು ಕಾರು 'ಗೂಗಲ್ ಇಂಕ್'ದು ಮತ್ತೊಂದು `ಡೆಲ್ಫಿ ಆಟೋಮೋಟಿವ್' ಕಂಪನಿಯದ್ದು. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ರಸ್ತೆಯಲ್ಲಿ ಲೇನ್ ಬದಲಿಸುವಾಗ ಆದ ಯಡವಟ್ಟಿನಿಂದಾಗಿ ಅಪಘಾತವೊಂದು ಸಂಭ ವಿಸಲಿತ್ತು ಎಂದು ಡೆಲ್ಫಿಯ ಉದ್ಯೋಗಿಯೊಬ್ಬರು ರಾಯಿಟರ್ಸ್ ಗೆ ತಿಳಿಸಿದ್ದಾರೆ. ಆದರೆ ಗೂಗಲ್ ಇಂಕ್ ಮಾತ್ರ ಅಂಥ ಯಾವ ಘಟನೆಯೂ ಸಂಭವಿಸಲೇ ಇಲ್ಲ ಎಂದಿದೆ.

ಡೆಲ್ಫಿ ಮತ್ತು ಗೂಗಲ್ ಒಂದೇ ಪ್ರದೇಶದಲ್ಲಿವೆ. ಗೂಗಲ್ ಕಳೆದ ಎರಡು ದಿನಗಳಿಂದಷ್ಟೆ ತನ್ನ ಸ್ವಯಂಚಾಲಿತ ಕಾರುಗಳನ್ನು ಪರೀಕ್ಷೆ ನಿಮಿತ್ತ ಓಡಾಡಿಸುತ್ತಿದೆ.ಡೆಲ್ಫಿ ಸ್ವಯಂಚಾಲಿತ ಕಾರು(ಆಡಿ ಕ್ಯೂ5) ಲೇನ್ ಬದಲಿಸಲು ತಯಾರಾಗುತ್ತಿದ್ದಾಗ, ಟೆಸ್ಟಿಂಗ್‍ನಲ್ಲಿದ್ದ ಗೂಗಲ್ ಇಂಕ್ ಕಾರು (ಲೆಕ್ಸಸ್ ಆರ್ಎಕ್ಸ್ 400ಹೆಚ್) ದಿಢೀರ್ ಅಡ್ಡ ಬಂದಿದೆ. ಡೆಲ್ಫಿ ತನ್ನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿಸಿದೆ ಎಂಬುದು ಪ್ರತ್ಯಕ್ಷದರ್ಶಿಗಳ ವಿವರಣೆ. ಸ್ವಯಂಚಾಲಿತ ವಾಹನಗಳಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು ಇದೇ ಪ್ರಪ್ರಥಮ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com