ನನ್ನ ವಿರುದ್ಧ ಸಂಸತ್ ನಿರ್ಣಯ ವಜಾಗೊಳಿಸಿ: ನ್ಯಾ.ಕಾಟ್ಜು

ಮಹಾತ್ಮಾ ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್‍ರನ್ನು ವಿದೇಶಿ ಏಜೆಂಟ್ ಗಳು ಎಂದು ಹೀಯಾಳಿಸಿದ ತಮ್ಮ ವಿರುದ್ಧ ಸಂಸತ್ ಅಂಗೀಕರಿಸಿದ...
ಮಾರ್ಕಂಡೇಯ ಕಾಟ್ಜು
ಮಾರ್ಕಂಡೇಯ ಕಾಟ್ಜು
Updated on: 

ನವದೆಹಲಿ: ಮಹಾತ್ಮಾ ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್‍ರನ್ನು ವಿದೇಶಿ ಏಜೆಂಟ್ ಗಳು ಎಂದು ಹೀಯಾಳಿಸಿದ ತಮ್ಮ ವಿರುದ್ಧ ಸಂಸತ್ ಅಂಗೀಕರಿಸಿದ ನಿರ್ಣಯ ವಿರುದ್ಧ ನ್ಯಾ.
ಮಾರ್ಕಂಡೇಯ ಕಾಟ್ಜು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ನಿರ್ಣಯವನ್ನು ವಜಾ ಮಾಡಬೇಕೆಂದು ಅವರು ಸುಪ್ರೀಂಕೋರ್ಟ್‍ಗೆ ಅರಿಕೆ ಮಾಡಿಕೊಂಡಿದ್ದಾರೆ. ವಾದ ಮಂಡಿಸದೆ ಸಂಸತ್ ತಮ್ಮ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿದೆ ಎಂದು ಫೇಸ್‍ಬುಕ್‍ನಲ್ಲಿ ಅವರು ಬರೆದುಕೊಂಡಿದ್ದಾರೆ. ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನೂ ಅಪ್‍ಲೋಡ್ ಮಾಡಿದ್ದಾರೆ.

ಸಾಮಾನ್ಯ ನ್ಯಾಯದ ಪ್ರಕಾರ ಪ್ರತಿಯೊಬ್ಬರಿಗೂ ಅಹವಾಲು ಮಂಡಿಸಲು ಅವಕಾಶ ನೀಡಬೇಕು. ಆದರೆ ಸಂಸತ್‍ನಲ್ಲಿ ಅದನ್ನು ಪಾಲಿಸಲಾಗಿಲ್ಲ ಎಂದು ನ್ಯಾ. ಕಾಟ್ಜು ಪ್ರತಿಪಾದಿಸಿದ್ದಾರೆ. ಮಾ. 11ರಂದು ರಾಜ್ಯಸಭೆಯಲ್ಲಿ, ಮಾ.12ರಂದು ಲೋಕಸಭೆಯಲ್ಲಿ ನ್ಯಾ. ಕಾಟ್ಜು ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com