ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ಗೆ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಪತ್ರಿಕೆಯಿಂದಲೂ ಮೆಚ್ಟುಗೆ ವ್ಯಕ್ತವಾಗಿದೆ...
ಪ್ರಗತಿಗೆ ಪೂರಕ ಬಜೆಟ್: ನ್ಯೂಯಾರ್ಕ್ ಟೈಮ್ಸ್
Updated on: 

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಗೆ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಪತ್ರಿಕೆಯಿಂದಲೂ ಮೆಚ್ಟುಗೆ ವ್ಯಕ್ತವಾಗಿದೆ.

ಇದು ಬೆಳವಣಿಗೆ ಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್. ಮೂಲಸೌಲಭ್ಯಕ್ಕಾಗಿ ಭಾರಿ ವೆಚ್ಚ, ಕಾರ್ಪೋರೇಟ್ ತೆರಿಗೆ ಕಡಿತದಂಥ ಬಜೆಟ್ ಕ್ರಮಗಳನ್ನು ಭಾರತದ ಉದ್ಯಮ ವಲಯವೂ ಸ್ವಾಗತಿಸಿದೆ. ಈ ಮಾರುಕಟ್ಟೆ ಸ್ನೇಹಿ ಕ್ರಮಗಳ ಜತೆಗೆ ಕಡಿಮೆ ದರದ ವಿಮೆ, ಪಿಂಚಣಿಗಳಂಥ ಬಡವರ ಪರ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನೂ ಬಜೆಟ್ ನಲ್ಲಿ ಘೋಷಿಸಲಾಗಿದೆ. ಈ ಮೂಲಕ ಉದ್ಯಮ ಹಾಗೂ ಜನಸಾಮಾನ್ಯ ಇಬ್ಬರನ್ನೂ ಮೆಚ್ಚಿಸುವ ಪ್ರಯತ್ನ ಮಾಡಲಾಗಿದೆ.

ಭಾರತದ ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳು ಈ ಬಜೆಟ್ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಈ ಬಜೆಟ್ ಹೂಡಿಕೆಗೆ ಉತ್ತೇಜನ ನೀಡುವಂಥ ಅನೇಕ ಸುಧಾರಣಾ ಕ್ರಮಗಳನ್ನು ಒಳಗೊಳ್ಳಲಿದೆ ಎಂದು ನಿರೀಕ್ಷಿಸಿದ್ದರು. ಆದರೆ, ಬಜೆಟ್ ನಲ್ಲಿ ಪ್ರಸ್ತಾಪಿತ ಘೋಷಣೆಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆಯಷ್ಟೆ. ಬಜೆಟ್ ಹಿನ್ನೆಲೆಯಲ್ಲಿ ತೆರೆದಿದ್ದ ಷೇರು ಮಾರುಕಟ್ಟೆಗಳು ಕುಸಿತ ಕಂಡವು. ಬಜೆಟ್ ಗೂ ಮೊದಲು ಸರ್ಕಾರಿ ವೆಚ್ಚವನ್ನು ಕಡಿತ ಮಾಡಬೇಕೇ ಅಥವಾ ಬೆಳವಣಿಗೆಗೆ ಉತ್ತೇಜನ ನೀಡಲು ಸಾರ್ವಜನಿಕ ಹೂಡಿಕೆಯನ್ನು ಜಾಸ್ತಿ ಮಾಡಿ, ಈ ಮೂಲಕ ಸಾಲದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಕ್ಷೇತ್ರ ಹಾಗೂ ಒತ್ತಡದಲ್ಲಿರುವ ಬ್ಯಾಂಕ್ ಗಳ ಹೊರೆಯನ್ನು ಇಳಿಸ ಬೇಕೇ ಎನ್ನುವುದೇ ತಲೆನೋವಿನ ಪ್ರಶ್ನೆ. ಶನಿವಾರ ಜೇಟ್ಲಿ ಮಂಡಿಸಿದ ಬಜೆಟ್ ಸಾರ್ವಜನಿಕ ಹೂಡಿಕೆಯಲ್ಲಿ ಹೆಚ್ಚಳ ಮಾಡಿದೆ. ರಸ್ತೆಗಳು, ಬಂದರುಗಳು, ರೈಲ್ವೆ ಮೇಲೆ ರು.700 ಶತಕೋಟಿಯಷ್ಟು ವೆಚ್ಚಮಾಡಲು ನಿರ್ಧರಿಸಿದೆ.

ಇದರ ಜತೆಗೆ, ವೆಚ್ಚ ಕಡಿತ ಗುರಿಯನ್ನು ಹಿಂಪಡೆದಿದೆ. ಅಲ್ಲದೆ, ಈ ಹಿಂದೆ ಶೇ.3.6ಕ್ಕೆ ಇಳಿಸಬೇ ಕೆಂದಿದ್ದ ವಿತ್ತೀಯ ಕೊರತೆಯ ಗುರಿಯನ್ನು ಶೇ.3.9ಕ್ಕೆ ನಿಗದಿಪಡಿಸಿದೆ. ಈ ಮೂಲಕ ವಿತ್ತೀಯ ಕೊರತೆಯನ್ನು ವರ್ಷದೊಳಗೆ ಶೇ.3ಕ್ಕಿಳಿಸಬೇಕೆನ್ನುವ ಗುರಿಯನ್ನೂ ಮುಂದೂಡಿದೆ. ಹಣಕಾಸು ಸಚಿವರ ಈ ಕ್ರಮಕ್ಕೆ ಬಹುತೇಕ ಎಲ್ಲ ಮಾರುಕಟ್ಟೆ ವಿಶ್ಲೇಷಕರು ತೃಪ್ತಿಪಟ್ಟಿದ್ದಾರೆಯೇ ಹೊರತು ಸಂಭ್ರಮಿಸಿಲ್ಲ ಎಂದಿದೆ ನ್ಯೂಯಾರ್ಕ್ ಟೈಮ್ಸ್ ನ ವರದಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com