

ಬೆಂಗಳೂರು: ದೆಹಲಿಯಲ್ಲಿ ಪ್ರಸ್ತುವ ಮುನ್ನಡೆಸಿಕೊಂಡು ಹೋಗುತ್ತಿರುವ ವ್ಯವಸ್ಥೆಯನ್ನು ಬದಲಿಸಿ, ದೆಹಲಿಯಲ್ಲಿ ಉತ್ತಮ ಸರ್ಕಾರವನ್ನು ನೀಡುವಂತೆ ಪಕ್ಷದ ಸಂಸದರಿಗೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.
ಅನಾರೋಗ್ಯದ ಬಳಲಿಕೆಯಿಂದಾಗಿ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿರುವ ಕೇಜ್ರಿವಾಲ್ ಪಕ್ಷದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ದೊರಕಿದ್ದು, ಪಕ್ಷ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದೆ. ಇದೀಗ ಪಕ್ಷದ ಸಂಸದರು ಮುಂದಿನ ಹೆಜ್ಜೆಯಿಟ್ಟು, ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.
ದೆಹಲಿಯನ್ನು ಮಾದರಿ ದೆಹಲಿಯಾಗಿ ರೂಪಿಸಿದರೆ, ರಾಷ್ಟ್ರದಲ್ಲಿ ರಾಜಕೀಯ ಹಾಗೂ ಹೊಸತನಕ್ಕೆ ಇಂಬು ನೀಡಿದಂತಾಗುತ್ತದೆ. ಈ ಕುರಿತಂತೆ ಪಕ್ಷದ ಸಂಸದರೊಂದಿಗೆ ಬಲವಾಗಿ ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ. ನಾವು ದೆಹಲಿಯಲ್ಲಿರುವ ವ್ಯವಸ್ಥೆಯನ್ನು ಮೊದಲು ಬದಲಿಸಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದ್ದು, ಇತರೆ ರಾಜ್ಯಗಳಲ್ಲೂ ಸಾಧಿಸುತ್ತದೆ ಎಂದು ಮಾತನಾಡುತ್ತಾರೆ. ನಾವೇನು ನೆಪೋಲಿಯನ್ ಗಳೇ ಬರುತ್ತಿದ್ದಂತೆ ಗೆಲುವು ಸಾಧಿಸುತ್ತೇವೆ ಎಂದು ಹೇಳಲು, ದೆಹಲಿಯಲ್ಲಿ ವ್ಯವಸ್ಥೆ ಬದಲಿಸಿ ಬಹಳಷ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ.ದೆಹಲಿಯಲ್ಲಿ ಉತ್ತಮ ಸರ್ಕಾರವನ್ನು ನೀಡಿದರೆ. ದೆಹಲಿಯ ಇಡೀ ವ್ಯವಸ್ಥೆ ಬದಲಾಗುತ್ತದೆ. ದೆಹಲಿ ಬದಲಾದರೆ ಇಡೀ ದೇಶವೂ ಬದಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ನಾವು ಗೆಲವು ಸಾಧಿಸಬಹುದು ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿದ್ದು, ಕಫ, ಕೆಮ್ಮು ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಹಲವು ದಿನಗಳಿಂದ ಕೆಮ್ಮು ಹಾಗೂ ಮಧುಮೇಹ ಸಮಸ್ಯೆಗಳು ದೀರ್ಘಕಾಲಿಕವಾಗಿ ಕಾಡುತ್ತಿತ್ತು. ಈ ಕಾರಣದಿಂದ ಆರೋಗ್ಯವನ್ನು ಸ್ಥಿರಕ್ಕೆ ತರಲು ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಮಾರ್ಚ್ 12 ರಂದು ದಾಖಲಾಗಿದ್ದರು.