ರಾಹುಲ್‌ಗಾಗಿ ಹುಡುಕಾಟ: ದೆಹಲಿ ಪೊಲೀಸರಿಂದ ರಾಹುಲ್ ಚಹರೆ ಬಗ್ಗೆ ಮಾಹಿತಿ ಕಲೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಾಗಿ ದೆಹಲಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಾಗಿ ದೆಹಲಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ರಾಹುಲ್ ಗಾಂಧಿ ರಜೆ ಮೇಲೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಪದೇ ಪದೇ ಹೇಳುತ್ತಿದ್ದರು ಇದನ್ನು ಗಂಭೀರವಾಗಿ ಪರಿಗಣಿಸದ ದೆಹಲಿ ಪೊಲೀಸ್ ರಾಹುಲ್ ಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.

ಎಐಸಿಸಿ ಕಚೇರಿಗೆ ತೆರಳಿದ ದೆಹಲಿ ಪೊಲೀಸರು ರಾಹುಲ್ ಗಾಂಧಿ ಚಹರೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕಛೇರಿ ಸಹಾಯಕನ ಬಳಿ ಅವರ ಫೋಟೋ, ಚಹರೆ, ಕೂದಲಿನ ಬಗ್ಗೆ ಹಾಗೂ ಅವರು ಹೇಗೆ ಕಾಣುತ್ತಾರೆಂಬ ಮಾಹಿತಿ ಕೇಳಿದ್ದರೆಂಬ ಮಾಹಿತಿ ಹೊರ ಬಿದ್ದಿದೆ. ಕಛೇರಿ ಸಹಾಯಕ ವಿಚಾರಣೆಗೆ ಬಂದಿದ್ದ ಪೊಲೀಸರ ಫೋಟೋ ತೆಗೆದು ಪಕ್ಷದ ಮುಖ್ಯಸ್ಥರಿಗೆ ನೀಡಿದ್ದಾರೆನ್ನಲಾಗಿದೆ.

ದೆಹಲಿ ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಮುಖಂಡರೊಬ್ಬರು, ರಾಹುಲ್ ಗಾಂಧಿ ಒಬ್ಬ ಜನ ಪ್ರತಿನಿಧಿ. ಅವರ ಕುರಿತಾದ ವಿವರ ಬೇಕಿದ್ದರೆ ಪೊಲೀಸರು ಲೋಕಸಭಾ ಕಾರ್ಯಾಲಯದಲ್ಲಿ ಪಡೆಯಬಹುದು. ರಜೆ ಮೇಲೆ ರಾಹುಲ್ ತೆರಳಿದ್ದರೂ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿರುವುದು ಅಕ್ಷಮ್ಯ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com